ರಜತ್

ಶೂ ಮೇಲೆ ದರ್ಶನ್ ಹೆಸರು ಹಾಕಿದ ರಜತ್: ಫ್ಯಾನ್ಸ್ ತರಾಟೆ

ನಟ ರಜತ್‌ ಅವರು ದರ್ಶನ್‌ ಮೇಲಿನ ಅಭಿಮಾನವನ್ನು ಪ್ರದರ್ಶಿಸಲು ಸ್ಪೆಷಲ್‌ ಫೋಟೋಶೂಟ್‌ ಮಾಡಿಸಿದ್ದಾರೆ. ಆದರೆ ರಜತ್‌ ಹಾಕಿರುವ ಪ್ಯಾಂಟ್‌ ಮೇಲೆ ಬರೆಯಲಾದ  “ದರ್ಶನ್‌” ಎಂಬ ಹೆಸರು ರಜತ್‌ ಧರಿಸಿದ್ದ ಶೂ ಮೇಲೆ ಬಂದಿದೆ. ಇದನ್ನು ಗಮನಿಸಿದ ದರ್ಶನ್‌ ಅಭಿಮಾನಿಗಳು ರಜತ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲೂ ರಜತ್‌ ದರ್ಶನ್‌ ಅವರ ಬಗ್ಗೆ ಮಾತನಾಡಿದ್ದರು. ದರ್ಶನ್‌ ಅವರ ಶೈಲಿಯಲ್ಲೇ ಮಿಂಚುತ್ತಿದ್ದ ರಜತ್‌ ಈಗ ದಚ್ಚು ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.  ರಜತ್‌ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ರಜತ್‌ ಅವರ  ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ದರ್ಶನ್‌ ಅಭಿಮಾನಿಯಾಗಿ ರಜತ್‌ ಮಾಡಿಕೊಂಡಿರುವ ಎಡವಟ್ಟಿನಿಂದ ಫುಲ್‌ ಶೇಪ್‌ಔಟ್‌ ಕೂಡ ಆಗಿದೆ. ರಜತ್‌ ಹಾಕಿರೋ ಪ್ಯಾಂಟ್‌ ಮೇಲೆಲ್ಲ ದರ್ಶನ್‌ ಅವರ ಸಿನಿಮಾಗಳ ಹೆಸರುಗಳಿವೆ. ಶರ್ಟ್‌ ಮೇಲೆ “D Boss” ಎಂದೂ ಇದೆ. ಕೈಯಲ್ಲಿ ಸ್ಟೈಲಾಗಿ ಲಾಂಗ್‌ ಹಿಡಿದು ಕರಿಯ ಸಿನಿಮಾದಲ್ಲಿ ದರ್ಶನ್‌ ಅವರನ್ನೇ ಹೋಲುವಂತೆ ಪೋಸ್‌ ಕೊಟ್ಟಿದ್ದಾರೆ. ಜತ್‌ ಹಾಕಿರುವ ಪ್ಯಾಂಟ್‌ ಮೇಲೆ ಬರೆಯಲಾಗಿದರು “ದರ್ಶನ್‌” ಎಂಬ ಹೆಸರು ಗಮನಿಸಿದ ದರ್ಶನ್‌ ಅಭಿಮಾನಿಗಳು ರಜತ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

”ಅಭಿಮಾನದ ಹೆಸರಿನಲ್ಲಿ ದರ್ಶನ್‌ ಅವರಿಗೇ ಅವಮಾನ ಮಾಡ್ತಿದ್ದೀರಲ್ಲ? ಶೂ ಮೇಲೂ ಅವರ ಹೆಸರು ಬರಬೇಕಿತ್ತಾ?” ಎಂದು ದರ್ಶನ್‌ ಅಭಿಮಾನಿಗಳು ಪ್ರಶ್ನಿಸಿದ್ದಾರೆ.   “ಬಹುಶಃ ಇದು ನಿಮ್ಮ ಗಮನಕ್ಕೆ ಬಾರದೆಯೂ ಆಗಿರಬಹುದು. ದಯವಿಟ್ಟು ಇಂತಹ ಹುಚ್ಚಾಟ ತೋರುವಾಗ ದರ್ಶನ್‌ ಅವರ ಘನತೆಗೆ ಧಕ್ಕೆ ತರದಂತೆ ಎಚ್ಚರ ವಹಿಸಿ ರಜತ್‌” ಎಂದೂ ಕಿವಿಮಾತು ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!