rajanikanth ಹೊಸ ಚಿತ್ರಗಳಿಗೆ ತಲೈವ ಒಪ್ಪಿಗೆ

ಸೂಪರ್ ಸ್ಟಾರ್ ರಜನಿಕಾಂತ್‌ ಅವರು ಜೈಲರ್ ನಂತರ ಲೈಕಾ ಪ್ರೊಡಕ್ಷನ್ಸ್‌ನ ಎರಡು ಚಿತ್ರಗಳಿಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ರಜನಿಕಾಂತ್‌ ಸದ್ಯ ʻಜೈಲರ್‌ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ‘ಜೈ ಭೀಮ್’ ನಿರ್ದೇಶಕ ಟಿ.ಜೆ.ಜ್ಞಾನವೇಲ್ ಅವರ ಕಥೆಯನ್ನು ಮೆಚ್ಚಿಕೊಂಡಿರುವ ತಲೈವ ಚಿತ್ರದಲ್ಲಿ ನಟಿಸಲು ಗ್ನೀನ್‌ ಸಿಗ್ನಲ್‌ ನೀಡಿದ್ದಾರೆ ಎನ್ನಲಾಗಿದೆ.

ಜೈಲರ್ ನಂತರ ಲೈಕಾ ಪ್ರೊಡಕ್ಷನ್ಸ್‌ನ ಎರಡು ಚಿತ್ರಗಳಿಗೆ ರಜನಿಕಾಂತ್‌ ಸಹಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ʻಲವ್ ಟುಡೇʼ ನಿರ್ದೇಶಕ ಪ್ರದೀಪ್ ರಂಗಂತನ್ ಅವರು ರಜನಿಕಾಂತ್ ಅವರಿಗೆ ಸ್ಕ್ರಿಪ್ಟ್ ವಿವರಿಸಿದ್ದರು. ಇದನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ.

ಇದೀಗ ʻಜೈಲರ್‌ʼ ನಂತರ ಯಾವ ಸಿನಿಮಾವನ್ನು ರಜನಿ ಮೊದಲು ಮಾಡಲಿದ್ದಾರೆ ಎಂದು ಸಿನಿರಸಿಕರಲ್ಲಿ ಕುತೂಹಲ ಉಂಟಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!