ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡು ಸೂಪರ್ ಸ್ಟಾರ್ ರಜನಿಕಾಂತ್ ಅವರು ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ.
ಕಾಂತಾರ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಕೆಲ ಹೊತ್ತು ರಜನಿಕಾಂತ್ ಅವರ ಜೊತೆ ಮಾತನಾಡಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿಗೆ ಕರೆ ಮಾಡಿ ಮಾತನಾಡಿದ್ದ ರಜನಿಕಾಂತ್ ಅವರು, ಕಾಂತಾರ ಮೇಕಿಂಗ್, ಅದನ್ನು ಹೇಳಿದ ರೀತಿ, ತೋರಿಸಿದ ಕ್ರಮದ ಬಗ್ಗೆ ರಜನಿಕಾಂತ್ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಈವರೆಗೂ ಹಣ ಗಳಿಕೆಯಲ್ಲಿ ಅದು ಯಾವತ್ತೂ ಹಿಂದೆ ಬಿದ್ದಿಲ್ಲ. 200 ಕೋಟಿಗೂ ಅಧಿಕ ಹಣವನ್ನು ಕಾಂತಾರ ಗಳಿಸಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕವೊಂದರಲ್ಲೇ 100 ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ. ತೆಲಂಗಾಣ, ಉತ್ತರ ಭಾರತ, ಕೇರಳ, ವಿದೇಶದಿಂದ ಒಟ್ಟು 80 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ.
___

Be the first to comment