33 ವರ್ಷಗಳ ಬಳಿಕ ಅಮಿತಾಬ್ ಬಚ್ಚನ್‌ ಜೊತೆಗೆ ರಜನಿಕಾಂತ್​ ಸಿನಿಮಾ!

ಸೂಪರ್‌ಸ್ಟಾರ್​ ರಜನಿಕಾಂತ್​​ 33 ವರ್ಷಗಳ ಬಳಿಕ ತಮ್ಮ ಸ್ನೇಹಿತ ಅಮಿತಾಬ್​​ ಬಚ್ಚನ್​ ಜೊತೆಗೆ ತೆರೆ ಹಂಚಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.

ಈ ಕುರಿತು ರಜನಿಕಾಂತ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮಾಹಿತಿ ನೀಡಿದ್ದಾರೆ.  ’33 ವರ್ಷಗಳ ಬಳಿಕ ನನ್ನ ಸ್ನೇಹಿತನೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅಮಿತಾಬ್​​ ಬಚ್ಚನ್​ ತಮ್ಮ ಮುಂದಿನ ಚಿತ್ರ ಲೈಕಾ ನಿರ್ಮಾಣದ ‘ತಲೈವರ್​ 170’ರಲ್ಲಿ ನಟಿಸುತ್ತಿದ್ದಾರೆ. ಇದೊಂದು ಹೃದಯ ತುಂಬಿದ ಸಮಯವಾಗಲಿದೆ’ ಎಂದು ರಜನಿಕಾಂತ್​​ ಹರ್ಷ ವ್ಯಕ್ತಪಡಿಸಿದ್ದಾರೆ.

‘ತಲೈವರ್​ 170’ ಚಿತ್ರಕ್ಕೆ ಲೈಕಾ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಜೆ.ಗ್ಯಾನವೆಲ್​ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಾಣಾ ದುಗ್ಗುಬಾಟಿ ಮತ್ತು ಫಹಾದ್​ ಫಸಲ್,  ದುಶರಾ ವಿಜಯನ್​, ರಿತಿಕ ಸಿಂಗ್​​, ಮಂಜು ವಾರಿಯರ್​​ ನಟಿಸುತ್ತಿದ್ದಾರೆ. ‘ಜೈಲರ್’​ ಸಿನಿಮಾಗೆ ಸಂಗೀತ ಸಂಯೋಜಿಸಿದ್ದ ಅನಿರುದ್ದ್​​ ರವಿಚಂದ್ರನ್​​ ಸಂಗೀತ ಚಿತ್ರಕ್ಕಿರಲಿದೆ.

‘ಜೈಲರ್’​​ ಯಶಸ್ಸಿನ​ ಬಳಿಕ ಸೂಪರ್‌ಸ್ಟಾರ್​ ರಜನಿಕಾಂತ್​​ ಮತ್ತೊಂದು ಚಿತ್ರ ಘೋಷಿಸಿದ್ದಾರೆ. ಜೈಲರ್’​​ ಕಲಾನಿಧಿ ಮಾರನ್​ ಅವರ ಸನ್​ ಪಿಕ್ಚರ್ಸ್​​ ನಿರ್ಮಾಣದಲ್ಲಿ ಮೂಡಿಬಂದ ಆಕ್ಷ್ಯನ್​ ಕಾಮಿಡಿ ಚಿತ್ರ ಆಗಿದ್ದು ಇದು ಬಾಕ್ಸ್​​ ಆಫೀಸ್​ನಲ್ಲಿ ಹಿಟ್ ಎನಿಸಿತು.

ಈಗ ರಜಿನಿಕಾಂತ್​​ ‘ಲಾಲ್​ ಸಲಾಂ’ ಚಿತ್ರದಲ್ಲಿ ಮಿಂಚಲು ಅಣಿಯಾಗುತ್ತಿದ್ದಾರೆ.  ಈ ಚಿತ್ರವನ್ನು ರಜನಿಕಾಂತ್​​ ಮಗಳು ಐಶ್ವರ್ಯ ರಜಿನಿಕಾಂತ್​ ನಿರ್ದೇಶನ,  ಲೈಕಾ ನಿರ್ಮಾಣದಡಿ ಸುಬಸ್ಕರನ್​ ಅಲಿರಾಜ್​ ನಿರ್ಮಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ವಿಷ್ಣು ವಿಶಾಲ್​ ಮತ್ತು ವಿಕ್ರಾಂತ್​ ಇದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!