ಅಕ್ಟೋಬರ್ 10ಕ್ಕೆ ರಜನಿ ಚಿತ್ರ ಬಿಡುಗಡೆ

ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ವೆಟ್ಟೈಯನ್’ ಅಕ್ಟೋಬರ್ 10ಕ್ಕೆ ಬಿಡುಗಡೆ ಆಗುತ್ತಿದೆ.

ಜೈ ಭೀಮ್ ಖ್ಯಾತಿಯ ಟಿ.ಜೆ ಜ್ಞಾನವೇಲ್ ನಿರ್ದೇಶನದಲ್ಲಿರುವ ತಯಾರಾಗುತ್ತಿರುವ ಈ ಚಿತ್ರ ರಜನಿ ನಟನೆಯ 170ನೇ ಚಿತ್ರ. ಇದರಲ್ಲಿ ತಲೈವರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾದಲ್ಲಿ ಬಹುತಾರಾಗಣವಿದ್ದುಬಹಳ ದಿನಗಳ ನಂತರ ರಜನಿಕಾಂತ್ ಅವರ ಜೊತೆಗೆ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶರಾ ವಿಜಯನ್, ರಕ್ಷನ್, ಜಿ ಎಂ ಕುಮಾರ್ ಮುಂತಾದವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ಕೂಟಥಿಲ್ ಒರುವನ್’, ‘ಜೈ ಭೀಮ್’ ನಂತರ ಟಿ ಜೆ ಜ್ಞಾನವೇಲ್ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. 2.0, ದರ್ಬಾರ್ ನಂತರ ರಜನಿಕಾಂತ್ ಜೊತೆಗೆ ಮೂರನೇ ಬಾರಿಗೆ ಲೈಕಾ ಪ್ರೊಡಕ್ಷನ್ಸ್ ಕೈಜೋಡಿಸಿದೆ. ‘ವೆಟ್ಟೈಯನ್’ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾಗೆ ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ, ಹೈದರಾಬಾದ್‌ನಲ್ಲಿ ಚಿತ್ರೀಕರಣ‌ ನಡೆಸಲಾಗಿದೆ.

ಅಕ್ಟೋಬರ್ 10ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕ ಸುಭಾಸ್ಕರನ್ ಸಿದ್ಧತೆ ನಡೆಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!