ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರರಂಗಕ್ಕೆ ಗುಡ್ ಬಾಯ್ ಹೇಳಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಐದು ದಶಕಗಳಿಂದಲೂ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರರಂಗದಿಂದ ದೂರ ಸರಿತಾರೆ ಅನ್ನೋ ಚರ್ಚೆ ಇದೆ. 70ರ ವಯಸ್ಸಿನಲ್ಲೂ ತಲೈವರ್ ಚಾರ್ಮ್ ಹಾಗೇಯೇ ಇದೆ. ಅವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿವೆ.
ರಜನಿಕಾಂತ್ ಪತ್ನಿ ಲತಾ ಅವರಿಗೆ ಮಾಧ್ಯಮಗಳು ಪಡೆಯಪ್ಪ ವಿದಾಯದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, “ನನಗೆ ಉತ್ತರ ತಿಳಿದಿರಬೇಕೆಂದು ನಾನು ಬಯಸುತ್ತೇನೆ. ನನಗೆ ತಿಳಿದಿದ್ದರೆ, ನಾನು ನಿಮಗೆ ಹೇಳುತ್ತಿದ್ದೆ” ಎಂದಿದ್ದಾರೆ. ಲತಾ ರಜನಿಕಾಂತ್ ಅವರಿಗೂ ರಜನಿ ನಿವೃತ್ತಿ ಬಗ್ಗೆ ಗೊತ್ತಿಲ್ಲವಂತೆ.
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ‘ಜೈಲರ್ 2’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಜೈಲರ್’ ಸಿನಿಮಾ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಸಂಸ್ಥೆಯೇ ‘ಕೂಲಿ’ ಸಿನಿಮಾಕ್ಕೂ ಹಣ ಹಾಕುತ್ತಿದೆ. 29 ವರ್ಷಗಳ ಹಿಂದೆ ಆರ್ ಶರತ್ ಕುಮಾರ್ ನಾಯಕತ್ವದಲ್ಲಿ ‘ಕೂಲಿ’ ಸಿನಿಮಾ ಬಂದಿತ್ತು. ಇದೀಗ ಅದೇ ಟೈಟಲ್ ನ್ನು ಮರುಬಳಕೆ ಮಾಡಿಕೊಳ್ಳಲಾಗಿದೆ. ಇದಾದ ಬಳಿಕ ತಲೈವ ಯಾವುದೇ ಸಿನಿಮಾ ಒಪ್ಪಿಕೊಂಡಂತಿಲ್ಲ.
—–





Be the first to comment