ಭಾರತೀಯ ಚಿತ್ರರಂಗದ ದಂತಕಥೆಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು 47 ವರ್ಷದ ಬಳಿಕ KHxRK ಎಂದು ತಾತ್ಕಾಲಿಕವಾಗಿ ಹೆಸರಿಸಲಾದ ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ.
ಬೀಸ್ಟ್ , ಜೈಲರ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಈ ನಿಸಿನಿಮಾ ನಿರ್ದೇಶಿಸುತ್ತಿದ್ದಾರೆ. ರೆಡ್ ಜೈಂಟ್ ಮೂವೀಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರೆಡ್ ಜೈಂಟ್ ಮೂವೀಸ್ ಸಂಸ್ಥೆ ಹೊಸ ಚಿತ್ರದ ಪ್ರಮೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನೆಲ್ಸನ್, ರವಿಚಂದರ್, ರಜನಿಕಾಂತ್ ಮತ್ತು ಹಾಸನ್ ನಡುವಿನ ದೃಶ್ಯವನ್ನು ತೋರಿಸಲಾಗಿದೆ. 3 ನಿಮಿಷ 46 ಸೆಕೆಂಡ್ ಗಳ ಪ್ರೊಮೋದಲ್ಲಿ ರಜನಿಕಾಂತ್ ತನ್ನದೇ ಆದ ಸಿಗ್ನೇಚರ್ ಶೈಲಿಯಲ್ಲಿ ಕಮಲ್ ಹಾಸನ್ ಕೈಗೆ ಕಾರಿನ ಕೀ ಎಸೆಯುತ್ತಾರೆ. ಬಳಿಕ ಇಬ್ಬರು ವಿಂಟೇಜ್ ಕಾರಿಗೆ ಹತ್ತುತ್ತಾರೆ.
ಇದು ಭಾರತೀಯ ಚಿತ್ರರಂಗಕ್ಕೆ ಒಂದು ಐಸಿಹಾಸಿಕ ಮತ್ತು ಭಾವುಕ ಕ್ಷಣವಾಗಿದ್ದು, ನಾವು ಈ ಜರ್ನಿಯನ್ನು ಜವಾಬ್ದಾರಿಯಿಂದ ಪ್ರಾರಂಭಿಸುತ್ತಿದ್ದೇವೆ ಎಂದು ರೆಡ್ ಜೈಂಟ್ ಮೂವೀಸ್ ವಕ್ತಾರರು ಹೇಳಿದ್ದಾರೆ.
—–





Be the first to comment