RRRನ ದೊಡ್ಡ ಯಶಸ್ಸಿನ ನಂತರ RRR ಸೀಕ್ವೆಲ್ ಮಾಡುವ ಸಂಬಂಧ ಪ್ರತಿಕ್ರಿಯಿಸಿರುವ ನಿರ್ದೇಶಕ ಎಸ್‌ಎಸ್ ರಾಜಮೌಳಿ RRR ಸೀಕ್ವೆಲ್ ಅನ್ನು ಖಚಿತಪಡಿಸಿದ್ದಾರೆ.
ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎಸ್ಎಸ್ ರಾಜಮೌಳಿ ಸೀಕ್ವೆಲ್ ಕುರಿತು ಮಾತನಾಡಿದ್ದು, ನನ್ನ ಎಲ್ಲಾ ಚಿತ್ರಗಳ ಕಥೆಗಾರ ನನ್ನ ತಂದೆ ವಿಜಯೇಂದ್ರ ಪ್ರಸಾದ್. ನಾವು ‘RRR 2’ ಬಗ್ಗೆ ಸ್ವಲ್ಪ ಚರ್ಚಿಸಿದ್ದೇವೆ. ತಂದೆ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಟಾಲಿವುಡ್ ನಟರಾದ ಜೂನಿಯರ್ ಜೂ.ಎನ್ಟಿಆರ್, ರಾಮ್ ಚರಣ್ ಅಭಿನಯದ ಮತ್ತು ಎಸ್‌ಎಸ್ ರಾಜಮೌಳಿ ನಿರ್ದೇಶನದ RRR ಬ್ಲಾಕ್ ಬಸ್ಟರ್ ಆಗಿತ್ತು.
RRR ಚಿತ್ರಕ್ಕೆ ಭಾರತವಲ್ಲದೆ ಜಪಾನ್ ನ ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
____

Be the first to comment