‘ರಾಜಲಕ್ಷ್ಮಿ’

ವೃತ್ತಿಯಲ್ಲಿ ವಕೀಲರಾಗಿರುವ ಕಾಂತರಾಜಗೌಡ ಅವರಿಗೆ ಮೊದಲಿನಿಂದಲೂ ಕಥೆ, ಕವನ ಬರೆಯುವ ಹವ್ಯಾಸವೊಂದಿದ್ದು ಈಗ ರಾಜಲಕ್ಷ್ಮಿ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ.ಮಂಡ್ಯದ ಕೆರೆಗೂಡು ಸಮೀಪದ ಸಿದ್ದಗೌಡನಹಳ್ಳಿ ಹೋಬಳಿಯಲ್ಲಿ ನಡೆದ ನೈಜ ಘಟನೆಯನ್ನು ರಾಜಲಕ್ಷ್ಮಿ ಚಿತ್ರದ ಮೂಲಕ ಬೆಳ್ಳಿತೆರೆಗೆ ತರಲು ಹೊರಟಿದ್ದಾರೆ ನಿರ್ಮಾಪಕ ಮೋಹನ್‍ಕುಮಾರ್.ನವೀನ್ ತೀರ್ಥಹಲ್ಳಿ ಹಾಗೂ ರಶ್ಮಿಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ರಾಜಲಕ್ಷ್ಮಿ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆ ನಡೆಯಿತು. ವಕೀಲರಾಗಿರುವ ಮೋಹನ್ ಅಪ್ಪಟ ಸಿನಿಮಾಪ್ರೇಮಿ. ಜನರಿಗೆ ಉತ್ತಮ ಸಂದೇಶವಿರುವ ಚಿತ್ರವನ್ನು ನೀಡಬೇಕು ಎಂಬುದು ಅವರ ಗುರಿ.

ಆದ್ದರಿಂದ ಸಹ ನಿರ್ಮಾಪಕರಾಗಿ ಮೂರು ಚಿತ್ರಗಳನ್ನು ನಿರ್ಮಿಸಿ ಸೋತಿದ್ದಾರೆ. ಈಗ ತಮ್ಮ ತಂದೆ ತಾಯಿಯ ಹೆಸರಾದ ರಾಜಲಕ್ಷ್ಮಿ ಟೈಟಲ್ ಅನ್ನೇ ಚಿತ್ರಕ್ಕಿಟ್ಟು ಸಿಹಿ ಕಾಣಲು ಹೊರಟಿದ್ದಾರೆ. ಚಿತ್ರ ನೈಜವಾಗಿರಲೆಂಬ ದೃಷ್ಟಿಯಿಂದ ಮಂಡ್ಯ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣ ನಡೆಸಿರುವ ಈ ಚಿತ್ರದಫಸ್ಟ್ ಕಾಫಿ ಕೂಡ ಹೊರಬಂದಿದೆ.17 ಕಥೆಗಳನ್ನು ಕೇಳಿ ಕೊನೆಗೆ ಇದರ ಆಯ್ಕೆ ಮಾಡಿಕೊಂಡಿರುವ ರಾಜಲಕ್ಷ್ಮಿಯಲ್ಲಿ ನೈಜ ಘಟನೆ ಇದ್ದು ಒಂದೇ ವಿಷಯವನ್ನು ತಂದೆ ಮತ್ತು ಮಗ ವಿಭಿನ್ನ ದೃಷ್ಟಿಕೋನದಿಂದ ಹೇಗೆ ನೋಡುತ್ತಾರೆ ಅನ್ನುವುದನ್ನು ಹೇಳುವುದರ ಜೊತೆಗೆ ಅಪ್ಪಟ ಪ್ರೇಮ ಕಥಾನಕವು ಇದ್ದು ಪ್ರೇಮಿಗಳಿಗೆ ಎದುರಾಗುವ ಸಮಸ್ಯೆಗಳು, ಹೋರಾಟ, ಕೊನೆಗೂ ಆ ಪ್ರೇಮಿಗಳ ಕಥೆ ಏನಾಯಿತು. ಇದೆಲ್ಲ ರಾಜಲಕ್ಷಿ ಚಿತ್ರದಲ್ಲಿದೆ. ಅಲ್ಲದೆ ಹಳ್ಳಿಗಳಲ್ಲಿ ನಡೆಯುವ ರಾಜಕೀಯದ ಚಿತ್ರಣವು ಈ ಚಿತ್ರದಲ್ಲಿದೆ.

ನವೀನ್ ತೀರ್ಥಹಳ್ಳಿ ಈ ಚಿತ್ರದ ನಾಯಕ. ನಾಲ್ಕು ಫೈಟ್, ಐದು ಹಾಡುಗಳಿರುವ ಈ ಚಿತ್ರದಲ್ಲಿ ಅವರದು ಆಧುನಿಕ ರೈತನ ಪಾತ್ರ. ಮಿಂಚುಳು, ಜೊತೆಯಾಗಿರುವ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ರಶ್ಮಿಗೌಡ ಈ ಚಿತ್ರದ ನಾಯಕಿ.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರ ಪಾತ್ರದಲ್ಲಿದ್ದಾರೆ. ಜೋಡಿಹಕ್ಕಿ ಸೇರಿದಂತೆ ಹಲವಾರು ಸೀರಿಯಲ್‍ಗಳಲ್ಲಿ ಅಭಿನಯಿಸಿರುವ ಮೀಸೆಮೂರ್ತಿ ಈ ಚಿತ್ರದಲ್ಲಿ ನರಸಿಂಹೇಗೌಡನ ಪಾತ್ರ ನಿರ್ವಹಿಸಿದ್ದಾರೆ. ಕಾಮಿಡಿ ಕಿಲಾಡಿಗಳ ಖ್ಯಾತಿಯ ಮುತ್ತುರಾಜ ಈ ಚಿತ್ರದಲ್ಲಿ ಗಡ್ಡಪ್ಪ ಎಂಬ ಹಾಸ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಈಗಾಗಲೇ ಈ ಚಿತ್ರದ ಆಡಿಯೋ ವನ್ನು ಅಂಬಿ ಹುಟ್ಟುಹಬ್ಬದಂದು ಸುಮಲತಾ ಅಂಬರೀಷ್ ಬಿಡುಗಡೆ ಮಾಡಿದ್ದಾರೆ. ಎ.ಟಿ.ರವೀಶ್ ಸಂಗೀತ , ನಾಗರಾಜ ಮೂರ್ತಿ ಛಾಯಾಗ್ರಹಣ, ನವೀನ್ ನೃತ್ಯನಿರ್ದೇಶನ ಚಿತ್ರಕ್ಕಿದೆ.

This Article Has 1 Comment
  1. Pingback: Novato Auto Glass Anytime

Leave a Reply

Your email address will not be published. Required fields are marked *

Translate »
error: Content is protected !!