‘ರಾಜ ದೇವ ಸಿಂಧು’ ಪ್ರಾರಂಭ

ದುರ್ಗಾ ಮೋಹನ್ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘ರಾಜ ದೇವ ಸಿಂಧು’  ಚಿತ್ರದ ಮುಹೂರ್ತ  ಇದೇ ತಂಡದ ‘ಆ … ಈ …’ ಜೊತೆಗೆ ಪ್ರಾರಂಭ ಆಯಿತು.

‘ಕರ್ನಾಟಕದಲ್ಲಿ ಮಹಾರಾಜರು ಎಂದರೆ ನಮಗೆ ಮೊದಲು ನೆನಪಿಗೆ ಬರುವುದು ಕೃಷ್ಣದೇವರಾಯ. ಅವರು ಮಾಡಿದ ಕೆಲಸ , ಸಾಧನೆ  ನಮಗೆಲ್ಲಾ ಸ್ಫೂರ್ತಿಯಾಗಿವೆ. ಅವೆಲ್ಲವನ್ನೂ ಇಟ್ಟುಕೊಂಡು ಕಾಲ್ಪನಿಕ ಕಥೆ ಹೆಣೆದಿದ್ದೇವೆ. ಈ ಶೀರ್ಷಿಕೆಯಲ್ಲಿ ಮೂರು ಹೆಸರುಗಳಿವೆ. ರಾಜ ಎನ್ನುವವನು ಈಗಿನವನು. ಡೆಲಿವರಿ ಬಾಯ್‍ ಆಗಿರುತ್ತಾನೆ. ದೇವರಾಯ ಎಂಬುದು ಫ್ಲಾಶ್‍ಬ್ಯಾಕ್‍ನಲ್ಲಿ ಬರುವ ಒಂದು ಪಾತ್ರ. ಸಿಂಧು ಎನ್ನುವುದು ಸಿಂಧೂಜಾ ಎಂಬ ಪಾತ್ರ. ಮೂರೂ ಸೇರಿ ‘ರಾಜ ದೇವ ಸಿಂಧು’ ಎಂದು ಹೆಸರಿಟ್ಟಿದ್ದೇವೆ. ಇದೊಂದು ಕಾಲ್ಪನಿಕ ಚಿತ್ರ’ ಎಂದರು ದುರ್ಗಾ ಮೋಹನ್.

‘ಏಳು ಜನ್ಮಗಳಿಗೊಮ್ಮೆ ಮನುಷ್ಯ ಜನ್ಮ ಬರುತ್ತದೆ ಎಂಬ ನಂಬಿಕೆ ಇದೆ. ಹಾಗಿರುವಾಗ, ಏಳು ಜನ್ಮಗಳ ಹಿಂದೆ ನಾವೇನು ಆಗಿರಬಹುದು ಎಂದು ಕಲ್ಪನೆಯೊಂದಿಗೆ ಮಾಡಿದ ಚಿತ್ರಆಗಿನ ಜನ್ಮದಲ್ಲಿ ಆಗುವ ಸನ್ನಿವೇಶಗಳು ಪುನಃ ಈಗ ರಿಪೀಟ್‍ ಆಗುತ್ತದಾ? ಅಲ್ಲಿ ಒಳ್ಳೆಯವನಾಗಿದ್ದವನು ಇಲ್ಲಿ ಕೆಟ್ಟವನಾಗಿರುತ್ತಾನಾ? ಇಲ್ಲಿ ಇವನು ಏನಾಗಿರುತ್ತಾನೆ? ಎಂಬ ಅಂಶಗಳನ್ನಿಟ್ಟುಕೊಂಡು ಕಥೆ ಮಾಡಿದ್ದೇವೆ’ ಎಂದರು.

ಪೌರಾಣಿಕ ಚಿತ್ರಗಳನ್ನು ಜನ ಇಷ್ಟಪಡುತ್ತಾರೆ. ಚಿತ್ರದಲ್ಲಿ ಯಾವುದೇ ಕಾಲಘಟ್ಟದ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಒಂದು ರಾಜರ ಕಾಲ. ಇನ್ನೊಂದು ಈಗಿನ ಕಾಲ. ಇವೆರಡನ್ನೂ ಸೇರಿಸಿ ಚಿತ್ರ ಮಾಡುತ್ತಿದ್ದೇವೆ. ಚಿತ್ರದ ಬಜೆಟ್‍ ಸ್ವಲ್ಪ ಹೆಚ್ಚಾಗುತ್ತದೆ. ಗ್ರಾಫಿಕ್ಸ್ ಕೆಲಸ ಜಾಸ್ತಿ ಇರುತ್ತದೆ’ ಎಂದರು.

‘ರಾಜ ದೇವ ಸಿಂಧು’  ಚಿತ್ರದಲ್ಲೂ ‘ಆ … ಈ …’ ತರಹ  ಭಾರ್ಗವ್‍ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಜನವರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗುತ್ತದೆ.

‘ರಾಜ ದೇವ ಸಿಂಧು’ ಚಿತ್ರದಲ್ಲಿ ಭಾರ್ಗವ್‍ಗೆ ನಾಯಕಿಯರಾಗಿ ಸ್ವಾತಿ ಪ್ರಭು, ಆರ, ಚಾವಸುಕಿ ಮತ್ತು ಅಕ್ಷಯ ನಟಿಸುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!