‘45’ ಟ್ರೇಲರ್ ವಿವಾದಕ್ಕೆ ರಾಜ್ ಶೆಟ್ಟಿ ಸ್ಪಷ್ಟನೆ

‘45’ ಸಿನಿಮಾದ ಟ್ರೇಲರ್  ಹೊಗಳುವ ವೇಳೆ ರಿಷಬ್ ಶೆಟ್ಟಿ ಅವರು ರಾಜ್ ಬಿ ಶೆಟ್ಟಿ ಹೆಸರನ್ನು ಉಲ್ಲೇಖಿಸದಿರುವ ಬಗ್ಗೆ ರಾಜ್ ಬಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

“ರಿಷಬ್ ಯಾರನ್ನೂ ದೂರ ತಳ್ಳುವ ವ್ಯಕ್ತಿ ಅಲ್ಲ. ಮೊದಲ ಬಾರಿ 5 ನಿಮಿಷ ರೆಕಾರ್ಡ್ ಮಾಡಿದ್ದರಂತೆ. ಆದರೆ ಅದು ತಾಂತ್ರಿಕ ಕಾರಣಕ್ಕೆ ಉಳಿದಿರಲಿಲ್ಲ. ಮತ್ತೆ ರೆಕಾರ್ಡ್ ಮಾಡುವಾಗ ಬಹುಶಃ ನನ್ನ ಹೆಸರು ಹೇಳಲು ಮರೆತಿರಬಹುದು” ಎಂದು ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ.

”ಕಾಂತಾರ: ಚಾಪ್ಟರ್ 1’ ಸಿನಿಮಾದ ಭಾಗವಾಗುವುದಿಲ್ಲ ಎಂದು ತಾವು ಈಗಾಗಲೇ ಹೇಳಿದ್ದ ಕಾರಣ ಆ ಸಿನಿಮಾವನ್ನು ನೋಡಿದ ಬಳಿಕವೂ ಅದರ ಬಗ್ಗೆ ಪ್ರಚಾರ ಮಾಡಿಲ್ಲ. ನಾನು ಭಾಗವಾಗದ ಸಿನಿಮಾವನ್ನು ನೋಡಿ ಜನರಿಗೆ ಶಿಫಾರಸು ಮಾಡುವುದು ಸರಿ ಅಲ್ಲ” ಎಂದು ಎಂದು ರಾಜ್  ಅವರು ಹೇಳಿದ್ದಾರೆ.

 ‘ಕನ್ನಡದ RRR’ ಎಂದು ಕರೆಯಲ್ಪಡುವ ರಾಜ್ ಬಿ ಶೆಟ್ಟಿರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಸಂಬಂಧದ ಬಗ್ಗೆ ಇತ್ತೀಚೆಗೆ ವದಂತಿಗಳು ಹರಡಿದ್ದವು. ಈ  ಬಗ್ಗೆ ರಾಜ್ ಬಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!