ಮರ್ಡರ್ ಮಿಸ್ಟರಿ ಸಿನಿಮಾ ‘ರೈಮ್ಸ್​​​​​​​’ಈ ಅಜಿತ್ ಜಯರಾಜ್ ಯಾರು ಗೋತ್ತಾ?

ಸ್ಯಾಂಡಲ್​ವುಡ್​​ಗೆ ಹೊಸಬರು ಹೆಚ್ಚಾಗಿ ಎಂಟ್ರಿ ನೀಡುತ್ತಿದ್ದಾರೆ. ‘ರೈಮ್ಸ್’ ಎಂಬ ಹೆಸರಿನ ಸಿನಿಮಾ ತಯಾರಾಗುತ್ತಿದ್ದು ಹೊಸಬರು ಈ ಸಿನಿಮಾವನ್ನು ತಯಾರಿಸಿದ್ದಾರೆ. ವಿಶೇಷ ಅಂದ್ರೆ ಭೂಗತ ಲೋಕದ ನಂಟಿದ್ದ ಬೆಂಗಳೂರಿನ ಎಂಪಿ ಜಯರಾಜ್ ಪುತ್ರ ಅಜಿತ್ ಜಯರಾಜ್​ ಬಹಳ ವರ್ಷಗಳ ನಂತರ ಮತ್ತೆ ಈ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಶೂಟಿಂಗ್ ಆರಂಭಕ್ಕೂ ಮುನ್ನ ‘ರೈಮ್ಸ್’ ಚಿತ್ರದ ವಿಶೇಷತೆಗಳ ಬಗ್ಗೆ ಹಂಚಿಕೊಳ್ಳಲು ಯುವ ನಿರ್ದೇಶಕ ಅಜಿತ್ ಕುಮಾರ್, ಜಯರಾಜ್ ಪುತ್ರ ಅಜಿತ್ ಜಯರಾಜ್, ಯುವ ನಟಿ ಸುಷ್ಮಾ ನಾಯರ್, ನಿರ್ಮಾಪಕ ರಮೇಶ್ ಆರ್ಯ, ಸಂಗೀತ ನಿರ್ದೇಶಕ ಶಕ್ತಿ ಸೇರಿ ಇಡೀ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಇದೊಂದು ಮರ್ಡರ್ ಮಿಸ್ಟರಿ ಸಿನಿಮಾ ಆಗಿದ್ದು, ಅಜಿತ್ ಜಯರಾಜ್ ಮೊದಲ ಬಾರಿ ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ಅಜಿತ್ ಜಯರಾಜ್ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದಾರೆ. ತಮಿಳು ಧಾರಾವಾಹಿಗಳಲ್ಲಿ ಖ್ಯಾತರಾಗಿರುವ ಕನ್ನಡತಿ ಸುಷ್ಮಾ ನಾಯರ್, ಅಜಿತ್ ಜಯರಾಜ್ ಪತ್ನಿ ಪಾತ್ರದಲ್ಲಿ ನಟಿಸಲಿದ್ದಾರೆ.

ವಿಶೇಷ ಅಂದ್ರೆ ಚಿತ್ರದಲ್ಲಿ ಹಾಡುಗಳು ಹಾಗೂ ಯಾವುದೇ ಆ್ಯಕ್ಷನ್ ಇರುವುದಿಲ್ಲವಂತೆ. ಕಮಲ್ ಹಾಸನ್ ಪ್ರೊಡಕ್ಷನ್ ಹೌಸ್​​​ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್ ಕುಮಾರ್ ಈ ಥ್ರಿಲ್ಲರ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ತಮಿಳು ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಶಕ್ತಿ, ಹಾಡುಗಳಿಲ್ಲದ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಲಿದ್ದಾರೆ. ಅರ್ಜುನ್ ಆಕ್ಟೋ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಮರ್ಡರ್ ಮಿಸ್ಟರಿ ಸಿನಿಮಾಕ್ಕೆ ರಮೇಶ್ ಆರ್ಯ ಬಂಡವಾಳ ಹೂಡಿದ್ದಾರೆ. ಮುಂದಿನ ತಿಂಗಳು ‘ರೈಮ್ಸ್’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾ ಅಜಿತ್ ಜಯರಾಜ್​​​ಗೆ ಬ್ರೇಕ್ ನೀಡುತ್ತಾ ಕಾದು ನೋಡಬೇಕು..

Be the first to comment

Leave a Reply

Your email address will not be published. Required fields are marked *

Translate »
error: Content is protected !!