ಮಳೆಗೆ ಬಿದ್ದ ಕಾಂತಾರ ಚಾಪ್ಟರ್ -1 ಸೆಟ್

ಕಾಂತಾರ ಚಾಪ್ಟರ್ -1 ಚಿತ್ರೀಕರಣ ಸಂದರ್ಭದಲ್ಲಿ ಯಾವುದೇ ಅವಘಡ ನಡೆದಿಲ್ಲ ಎಂದು ಹೊಂಬಾಳೆ ಫಿಲಂ ಸ್ಪಷ್ಟನೆ ನೀಡಿದೆ.

ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್‌ಗಾಗಿ ಬ್ಯಾಕ್ ಡ್ರಾಪ್‌ನಲ್ಲಿ ದೋಣಿ ಸೆಟ್ ಹಾಕಲಾಗಿತ್ತು. ಭಾರೀ ಗಾಳಿ, ಮಳೆಗೆ  ಸೆಟ್ ಕೆಳಗೆ ಬಿದ್ದಿದೆ. ಬ್ಯಾಕ್ ಡ್ರಾಪ್ ಕೆಳಗೆ ಬಿದ್ದಾಗ ಸುತ್ತಮುತ್ತ  ಶೂಟಿಂಗ್‌ನವರು ಇರಲಿಲ್ಲ. ಇದರಿಂದ ಯಾರಿಗೂ ತೊಂದರೆ ಆಗಿಲ್ಲ.

ಘಟನೆ ನಡೆದ ಸ್ಥಳದಿಂದ ದೂರದಲ್ಲಿ ಚಿತ್ರೀಕರ ನಡೆಯುತ್ತಿತ್ತು. ಹೀಗಾಗಿ, ಯಾವುದೇ ಅವಘಡಗಳು ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಚಿತ್ರೀಕರಣ ಯೋಜಿಸಿದಂತೆಯೇ ಮುಂದುವರೆಯಲಿದೆ. ಶೂಟಿಂಗ್‌ಗಾಗಿ ಎಲ್ಲಾ ಇಲಾಖೆಗಳ ಅನುಮತಿ ಪಡೆದಿದ್ದೇವೆ. ದೋಣಿಗಳು, ಮೀನುಗಾರರು, ಈಜುಗಾರರು, ಸ್ಕೂಬಾ ಡೈವರ್‌ಗಳು ಮತ್ತು ಲೈಫ್ ಜಾಕೆಟ್‌ಗಳಂತಹ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ ಹೇಳಿದ್ದಾರೆ.

ಕ್ಯಾಮೆರಾಗಳಿಗೆ ಯಾವುದೇ ಹಾನಿಯಾಗಿಲ್ಲ. ಅವು ಮುಳುಗಿದ್ದರೆ ನಾವು ಚಿತ್ರೀಕರಣ  ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ಪೊಲೀಸರು ಸ್ಥಳವನ್ನು ಪರಿಶೀಲಿಸಿದ್ದು ಯಾವುದೇ ಅವಘಡ ಸಂಭವಿಸಿಲ್ಲ ಎಂದು ದೃಢಪಡಿಸಿದ್ದಾರೆ ಎಂದು ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!