ಕನ್ನಡದ ನಟನ ನಿವಾಸದ ಮೇಲೆ ಇಡಿ ದಾಳಿ

ಮುಂಬೈನ ಮಿಥಿ ನದಿ ಹೂಳು ತೆಗೆಯುವ ಯೋಜನೆಯಲ್ಲಿ ನಡೆದ ಅಕ್ರಮ  ಪ್ರಕರಣಕ್ಕೆ ಸಂಬಂಧಿಸಿ ಬಹುಭಾಷಾ ನಟ ಡೀನೋ ಮೋರಿಯಾ ಅವರ ನಿವಾಸದ ಮೇಲೆ ಇಡಿ ದಾಳಿ  ನಡೆಸಿದೆ.

ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ದಾಳಿ ನಡೆದಿದೆ. ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣದಲ್ಲಿ ಈ ಮೊದಲು ಮುಂಬೈ ಪೊಲೀಸರು ಡೀನೋ ಮೋರಿಯಾ ಅವರನ್ನು ವಿಚಾರಣೆ ನಡೆಸಿದ್ದರು.

ಮಿಥಿ ನದಿ ಹೂಳು ತೆಗೆಯುವ ಯೋಜನೆಯಲ್ಲಿ  65 ಕೋಟಿ ರೂಪಾಯಿ ಅಕ್ರಮ  ನಡೆದಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ  ಮುಂಬೈ ಹಾಗೂ ಕೇರಳದ 15 ಕಡೆಗಳಲ್ಲಿ ಇಡಿ ದಾಳಿ ನಡೆಸಿದೆ. ಈ ಪೈಕಿ ನಟ ಡೀನೋ ಮೋರಿಯಾ ಅವರ ನಿವಾಸ, ಬಾಂಬೆ ನಗರದ ಸಹಾಯಕ ಇಂಜಿಯರ್ ಪ್ರಶಾಂತ್ ರಾಮುಗಡೆ ಅವರ ಮನೆ ಸೇರಿದೆ.  ಡೀನೋ ಮೋರಿಯಾ ಅವರನ್ನು ಶಿವಸೇನೆ  ಯುವ ನಾಯಕ ಮತ್ತು ಶಾಸಕ ಆದಿತ್ಯ ಠಾಕ್ರೆ ಅವರ ಆಪ್ತ ಸಹಾಯಕ ಎಂದು ಪರಿಗಣಿಸಲಾಗಿದೆ.

ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ಕೇತನ್ ಕದಮ್ ಮತ್ತು ಡೀನೋ ನಡುವೆ 2019ರಿಂದ 2022ರ ನಡುವೆ  ಹಣಕಾಸಿನ ವಹಿವಾಟುಗಳು ನಡೆದಿವೆ. ಆರ್ಥಿಕ ಅಪರಾಧಗಳ ವಿಭಾಗ  ಈ ವಿಷಯವನ್ನು ತನಿಖೆ ಮಾಡುತ್ತಿದೆ.

ಮುಂಬೈನ ಮಿಥಿ ನದಿಯಿಂದ ಹೂಳು ತೆಗೆಯುವ ಈ ಯೋಜನೆ ಕಳೆದ 20 ವರ್ಷಗಳಿಂದ ನಡೆಯುತ್ತಿದೆ. ಇದಕ್ಕಾಗಿ 1100 ಕೋಟಿ ರೂ.ಗಳ ಕಾಂಟ್ರ್ಯಾಕ್ಟ್ ನೀಡಲಾಗಿದೆ. ಇದರಿಂದ ಮುಂಬೈ ಪಾಲಿಕೆಗೆ 65.54 ಕೋಟಿ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.

ಡೀನೋ ಮೋರಿಯಾ ಬೆಂಗಳೂರು ಮೂಲವನ್ನು ಹೊಂದಿದ್ದಾರೆ.  ಅವರು ನಟ, ನಿರ್ಮಾಪಕ ಹಾಗೂ ಮಾಡೆಲ್.  ಕನ್ನಡದಲ್ಲಿ ‘ಜ್ಯೂಲಿ’ ಹೆಸರಿನ ಚಿತ್ರ ಮಾಡಿದ್ದರು. ರಮ್ಯಾ ಈ ಚಿತ್ರಕ್ಕೆ ನಾಯಕಿ ಆಗಿ ನಟಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!