ರಾಗಿಣಿಗೆ ಲೆಜೆಂಡ್ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಅವರಿಗೆ ಲೆಜೆಂಡ್ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

” ಕಳೆದ ಎರಡು ವರ್ಷಗಳಿಂದ ಮಾಡಿರುವ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕರೋನ ಸಮಯದಲ್ಲಿ ಹಗಲು – ರಾತ್ರಿ ಎನ್ನದೇ ತಮ್ಮನ್ನು ತೊಡಗಿಸಿಕೊಂಡ ನಮ್ಮ ತಂಡದ ಎಲ್ಲಾ ಸದಸ್ಯರಿಗೂ ಧನ್ಯವಾದ ಹೇಳುತ್ತೇನೆ. ಈ ಪ್ರಶಸ್ತಿ ಪಡೆದಿರುವುದಕ್ಕೆ ತುಂಬಾ ಖುಷಿ ಆಗಿದೆ” ಎಂದು ರಾಗಿಣಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
” ಈ ಪ್ರಶಸ್ತಿಯನ್ನು ಪಡೆದ ಮೊದಲ ದಕ್ಷಿಣ ಭಾರತದ ಮಹಿಳೆ ನಾನಾಗಿದ್ದೇನೆ. ಇದು ತುಂಬಾ ಹೆಮ್ಮೆಯ ವಿಚಾರ ಆಗಿದೆ. ನಮ್ಮ ಕೆಲಸ ಇಲ್ಲಿಗೆ ಮುಗಿಯುವುದಿಲ್ಲ. ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ರಾಗಿಣಿ ಅವರಿಗೆ ಲೆಜೆಂಡ್ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ.
ಕರೋನ ಸಂದರ್ಭದಲ್ಲಿ ರಾಗಿಣಿ ದ್ವಿವೇದಿ ಅವರು ಬಡವರಿಗೆ ದಿನಸಿ ಕಿಟ್, ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದರು.
ಈ ಹಿಂದೆ ತಮ್ಮ ನಟನೆಗೆ ಪ್ರಶಸ್ತಿ ಪಡೆದಿದ್ದ ರಾಗಿಣಿ ಈಗ ಸಮಾಜ ಸೇವೆಗಾಗಿ ಪ್ರಶಸ್ತಿ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!