ನಂದ ಕಿಶೋರ್ ನಿರ್ದೇಶನದ ರಾಣಾ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಗೆ ತುಪ್ಪದ ಬೆಡಗಿ ಖ್ಯಾತಿಯ ನಟಿ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಲಿದ್ದಾರೆ.
ಶ್ರೇಯಸ್ ಮಂಜು ಮತ್ತು ರೇಷ್ಮಾ ನಾಣಯ್ಯ ನಟಿಸಿರುವ ರಾಣಾ ಸಿನಿಮಾದ ವಿಶೇಷ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಲಿದ್ದಾರೆ. ಈ ಹಿಂದೆ ಇಮ್ರಾನ್ ಸರ್ದಾರಿಯಾ ಮತ್ತು ರಾಗಿಣಿ “ತುಪ್ಪ ಬೇಕಾ ತುಪ್ಪ “ಹಾಡಿಗೆ ಜೊತೆ ಆಗಿದ್ದರು. ಇದಕ್ಕೆ ಚುಟು ಚುಟು ಸಾಂಗ್ ಖ್ಯಾತಿಯ ಶಿವು ಬೈರಾಗಿ ಸಾಹಿತ್ಯ, ಚಂದನ್ ಶೆಟ್ಟಿ ಸಂಗೀತ ನೀಡಿದ್ದರು.
ಈ ಹಾಡು ನಂದಕಿಶೋರ್ ಮತ್ತು ರಾಗಿಣಿ ಅವರ ಹ್ಯಾಟ್ರಿಕ್ ಕಾಂಬಿನೇಷನ್ ಆಗಿದೆ. ಈ ಮೊದಲು ‘ಯಕ್ಕಾ ನಿನ್ನ ಮಗಳು’, ‘ಐಟಂ ಸಾಂಗ್ ಬ್ಯಾನ್ ಆಗಬೇಕು’ ಎಂಬ ಹಾಡಿಗೆ ಇವರಿಬ್ಬರೂ ಜೊತೆಯಾಗಿದ್ದರು.
“ನಾವು ಈಗಾಗಲೇ ತಂಡವನ್ನು ಸಿದ್ಧಪಡಿಸಿದ್ದೇವೆ. ಸೆಟ್ ಕೆಲಸ ಮುಗಿದ ನಂತರ ಹಾಡಿನ ಚಿತ್ರೀಕರಣ ಮಾಡುತ್ತೇವೆ. ಕೇವಲ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ” ಎಂದು ನಂದ ಕಿಶೋರ್ ಹೇಳಿದ್ದಾರೆ.
ರಾಣಾ ಸಿನಿಮಾವನ್ನು ಕೆ.ಮಂಜು ಮತ್ತು ಗುಜ್ಜಾಲ್ ಪುರುಷೋತ್ತಮ್ ನಿರ್ಮಾಣ ಮಾಡಿದ್ದಾರೆ.

Be the first to comment