Vijay Raghavendra: ʻರಾಘುʼ ಟ್ರೈಲರ್‌ ಬಿಡುಗಡೆ

ವಿಜಯ್ ರಾಘವೇಂದ್ರ ನಟನೆಯ ʻರಾಘುʼ ಚಿತ್ರದ ಟ್ರೈಲರ್‌ ಬಿಡುಗಡೆ ಆಗಿದೆ.

ಏಪ್ರಿಲ್‌ 28ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿರುವ ಚಿತ್ರವನ್ನು ಎಂ ಆನಂದ್ ರಾಜ್ ನಿರ್ದೇಶನ ಮಾಡಿದ್ದಾರೆ.

ರಾಘು ಸಿನಿಮಾ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರವಾಗಿದೆ. ಹೊಸ ಬಗೆ ಥ್ರಿಲ್ ನೀಡುವ ಈ ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಇರಲಿದ್ದಾರೆ. ಇದನ್ನು ಸೋಲೋ ಆಯಕ್ಟಿಂಗ್ ಸಿನಿಮಾ ಎನ್ನಬಹುದು. ಸೋಲೋ ಆಗಿ ಬರುತ್ತಿರುವ ಚಿತ್ರಕ್ಕೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. ʻರಾಘುʼ ಟ್ರೈಲರ್‌ಗೆ ಶಿವಣ್ಣನ ಪವರ್ ಫುಲ್ ವಾಯ್ಸ್ ಇದೆ.

ಚಿತ್ರಕ್ಕೆ ಶಿವಣ್ಣನ ವಾಯ್ಸ್, ವಿಜಯ್ ರಾಘವೇಂದ್ರ ಆಕ್ಟಿಂಗ್, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ಇರಲಿದೆ.

ಟ್ರೈಲರ್‌ ರಿಲೀಸ್ ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, ‘ರಾಘು ಸಿನಿಮಾ ಬಗ್ಗೆ ಮಾತಾನಾಡಲು ತುಂಬಾ ಅಂಶವಿದೆ. ಇದೇ 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಸೋಲೋ ಆಯಕ್ಟರ್ ಚಿತ್ರವಾಗಿದ್ದು, ಒಬ್ಬನೇ ಕಲಾವಿದ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. 28ಕ್ಕೆ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಬೆಂಬಲಿಸಿʼʼ ಎಂದರು.

ನಿರ್ದೇಶಕ ಎಂ.ಆನಂದ್ ರಾಜ್ ʻʻರಾಘು ಪಯಣಕ್ಕೆ ಬೆಂಬಲ ಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ಎಲ್ಲಾ ಆಕ್ಟರ್ಸ್ಸ್ ಹಾಕಿಕೊಂಡು ಸಿನಿಮಾ ಮಾಡಿದಾಗ ನಿರ್ಮಾಪಕರು ಸಿಗುವುದು ಕಷ್ಟ. ಇನ್ನೂ ಸೋಲೋ ಆಕ್ಟರ್ ಇಟ್ಟುಕೊಂಡು ಕಥೆ ಹೆಣೆದು ಸಿನಿಮಾ ಮಾಡುವುದು ತುಸು ಕಷ್ಟವೇ. ಇದು ಸಂಪೂರ್ಣ ಟೆಕ್ನಿಕಲ್ ಚಿತ್ರವಾಗಿದ್ದು, ಸೋಲೋ ಆಕ್ಟರ್ ಕಥೆಯಾಗಿದ್ದರೂ ಸಾಂಗ್ಸ್, ಫೈಟ್ಸ್, ಟ್ವಿಸ್ಟ್ ಎಲ್ಲವೂ ಇದೆʼʼಎಂದಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!