ವಿಕ್ರಮ್ ಯಶೋಧರ್ ಎನ್. ಆಕ್ಷನ್ ಕಟ್ ಹೇಳಿರುವ ‘ರಾಘವೇಂದ್ರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದ್ದು, ಫೆಬ್ರುವರಿ ಮೊದಲ ವಾರ ಚಿತ್ರ ಬಿಡುಗಡೆ ಆಗಲಿದೆ. ಟೀಸರ್ ಈಗಾಗಲೇ ಬಿಡುಗಡೆ ಆಗಿದೆ.
ಸುಪ್ರೀತ್ಗೆ ಜೋಡಿಯಾಗಿ ಈ ಚಿತ್ರದಲ್ಲಿ ಪ್ರತೀಕ್ಷಾ ನಟಿಸಿದ್ದಾರೆ. ನಿರ್ದೇಶಕ ವಿಕ್ರಮ್ ಮಾತನಾಡಿ, ‘ಇದು ನನ್ನ ಹಾಗೂ ಸುಪ್ರೀತ್ ಅವರ ಕಾಂಬಿನೇಷನ್ನ ಎರಡನೇ ಸಿನಿಮಾ. ಅರಕೆರೆ, ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.
ಇದೊಂದು ವಿಷಯಾಧಾರಿತ ಚಿತ್ರ. ಒಬ್ಬ ಬಾರ್ ಸಪ್ಲೈಯರ್ ಹಾಗೂ ಅನಕ್ಷರಸ್ಥ ಹುಡುಗಿ ಇಬ್ಬರೂ ಸೇರಿ ಹಳ್ಳಿಯ ಅಭಿವೃದ್ಧಿಗೆ ಪಣತೊಡುತ್ತಾರೆ. ಊರಿಗೆ ಬೇಕಾದ ಮೂಲಸೌಕರ್ಯಗಳನ್ನು ಹಳ್ಳಿಯ ಜನರ ಜೊತೆಗೂಡಿ ಅನುಷ್ಠಾನ ಮಾಡುತ್ತಾರೆ ಎನ್ನುವುದು ಚಿತ್ರದ ಕಥೆ ಆಗಿದೆ.
‘ನನಗೆ ಮೊದಲಿಂದಲೂ ಸಿನಿಮಾ ಹುಚ್ಚು. ಇದು ನನ್ನ ಎರಡನೇ ಚಿತ್ರ. ಹುಲಿದುರ್ಗ ನಂತರ ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಸಿನಿಮಾ ಕಮರ್ಷಿಯಲ್ ಅಂಶಗಳಿಂದ ಕೂಡಿದ್ದರೂ, ಒಂದೊಳ್ಳೆಯ ಸಂದೇಶ ಚಿತ್ರದಲ್ಲಿದೆ’ ಎಂದು ಸುಪ್ರೀತ್ ಹೇಳಿದ್ದಾರೆ.
ರಂಗಭೂಮಿಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿರುವ ಪ್ರತೀಕ್ಷಾ ಅವರಿಗೆ ಇದು ಚೊಚ್ಚಲ ಚಿತ್ರ. ಚಿತ್ರಕ್ಕೆ ಅಲೆಕ್ಸ್ ಸಂಗೀತ ನಿರ್ದೇಶನಾ, ಎನ್.ಉಮೇಶ್ ಕ್ಯಾಮೆರಾ, ದೀಪಕ್ ಸಿ.ಎಸ್. ಸಂಕಲನ ಇದೆ.
___

Be the first to comment