ಜೀ ಕನ್ನಡ ವಾಹಿನಿ ಸದಾ ನವನವೀನ ಕಾರ್ಯಕ್ರಮಗಳನ್ನು ರೂಪಿಸುತ್ತಾಕನ್ನಡಿಗರ ಮನೆ ಮಾತಾಗಿದೆ. ವಿಶಿಷ್ಟ ಕಥಾ ಹಂದರವುಳ್ಳ ಧಾರಾವಾಹಿಗಳನ್ನು ನಿರ್ಮಿಸಿ ನಿರಂತರವಾಗಿ ಕನ್ನಡಿಗರಿಗೆ ಮನರಂಜನೆಯ ಮಹಾಪೂರವನ್ನೇ ಒದಗಿಸಿದೆ. ಕಿರುತೆರೆಯ ಸಾಂಪ್ರದಾಯಿಕ ಚೌಕಟ್ಟನ್ನೂ ಮೀರಿ, ಸತತವಾಗಿ ವೀಕ್ಷಕರ ಮುಂದೆ ಹೊಸ ಅಲೆಯ ಕಥೆಗಳನ್ನು ಕಟ್ಟಿಕೊಡುತ್ತಿದೆ. ಅಂತಹ ಯಶಸ್ವೀ ಧಾರಾವಾಹಿಗಳಲ್ಲಿ ‘ರಾಧಾಕಲ್ಯಾಣ’ಧಾರಾವಾಹಿಯೂಒಂದು.‘ರಾಧಾಕಲ್ಯಾಣ’ ಒಂದು ವಿಶಿಷ್ಟ ಕಲ್ಯಾಣಕ್ಕೆ ಸಾಕ್ಷಿಯಾಗುವುದರ ಮೂಲಕ ಕುತೂಹಲಕರಘಟ್ಟಕ್ಕೆ ಬಂದು ನಿಂತಿದೆ.
ಶ್ರೀಮಂತ ಕುಟುಂಬದಲ್ಲಿ ಬೆಳೆದಿರು ಕಥಾನಾಯಕ ಕೃಷ್ಣ ಯಾವುದೇ ಜವಾಬ್ದಾರಿಗಳಿಲ್ಲದೇ ಮೋಜು ಮಸ್ತಿ ಮಾಡುವುದೇಜೀವನಎಂದುಕೊಂಡವನು. ಅತ್ತಕಥಾನಾಯಕಿ ರಾಧಾಕುಟುಂಬದ ನಿರ್ವಹಣೆಗಾಗಿ ಹೂವಿನ ಅಲಂಕಾರ ಮಾಡುವ ವೃತ್ತಿ ಕೈಗೊಂಡವಳು. ವಿಶಿಷ್ಟ ಸಂದರ್ಭದಲ್ಲಿಇಬ್ಬರ ಭೇಟಿಯಾಗಿ, ರಾಧಾ ಕೃಷ್ಣನ ಕಂಪನಿಯಲ್ಲಿ ಅವನ ಪಿ.ಎ. ಆಗಿ ಕೆಲಸಕ್ಕೆ ಸೇರುವಂತಾಗುತ್ತದೆ.
ರಾಧಾ-ಕೃಷ್ಣರ ಬಾಲ್ಯದಘಟನೆಯೊಂದು ಮತ್ತೆ ಮುನ್ನೆಲೆಗೆ ಬಂದು ಈ ಕಥೆಗೆತಿರುವುಕೊಡುತ್ತದೆ. ಪ್ರಸ್ತುತ ಮದುವೆ ನಡೆಯುತ್ತಿರುವುದು ಕೃಷ್ಣನಿಗೆ, ಆದರೆರಾಧೆಯ ಜೊತೆ ಅಲ್ಲ. ನಕ್ಷತ್ರ ಎಂಬ ಹುಡುಗಿಯಜೊತೆ.ಅತ್ತರಾಧೆಗೂ ಮದುವೆ ನಿಶ್ಚಯವಾಗಿದೆ, ಕೃಷ್ಣನ ಜೊತೆ ಅಲ್ಲ.. ಮುನಿ ಎಂಬ ದುರುಳನ ಜೊತೆಗೆ.ಅವನಿಂದ ಹೆಣ್ಣು ಮಕ್ಕಳ ಸಾಗಾಟಜಾಲಕ್ಕೆ ಬಲಿ ಆಗಲಿರುವರಾಧಾಳ ಮದುವೆಯನ್ನು ಕೃಷ್ಣ ಹೇಗೆ ತಡೆಯುತ್ತಾನೆ ಎಂಬುದು ಕುತೂಹಲಕರಘಟ್ಟ. ಹಾಗಾದರೆ ಕೃಷ್ಣ ಮತ್ತು ನಕ್ಷತ್ರಳ ಮದುವೆ ನಡೆಯುವುದೇ? ಕಾದು ನೋಡಬೇಕು.
“ಹೆಣ್ಣುಮಕ್ಕಳ ಮೇಲೆ ಮೋಸ-ದೌರ್ಜನ್ಯಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಅಂಥ ಸಂದರ್ಭಗಳ ಬಗ್ಗೆ ಅರಿವು ಮೂಡಿಸುವ ಸಣ್ಣ ಪ್ರಯತ್ನರಾಧಾಕಲ್ಯಾಣದ ವಿಶಿಷ್ಟ ಕಲ್ಯಾಣದ ಮೂಲಕ ನಡೆಯುತ್ತಿದೆ”ಎನ್ನುತ್ತಾರೆ ಜಿಕನ್ನಡ ವಾಹಿನಿಯ ಬಿಸ್‍ನೆಸ್ ಹೆಡ್ ರಾಘವೇಂದ್ರ ಹುಣಸೂರು.
‘ರಾಧಾಕಲ್ಯಾಣ’ ಜಿ ಕನ್ನಡದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆಪ್ರಸಾರವಾಗುತ್ತಿದೆ.
Pingback: site web