ಡಿಂಪಲ್ ಕ್ವೀನ್ ರಚಿತಾ ರಾಮ್ ತೆಲುಗು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದು, ತೆಲುಗು ಚಿತ್ರ ‘ಸೂಪರ್ ಮಚ್ಚಿ’ ಸಿನಿಮಾದ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಚಿತಾ ರಾಮ್ ನಟನೆಯ ಬಗ್ಗೆ ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ಚಿತ್ರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ಇದೇ ತಿಂಗಳ 14ನೇ ತಾರೀಕು ರಿಲೀಸ್ ಆಗಲಿದ್ದು, ತೆಲುಗು ಚಿತ್ರರಂಗದಲ್ಲಿ ರಚಿತಾ ರಾಮ್ ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ.
ಸೂಪರ್ ಮಚ್ಚಿ’ ಸಿನಿಮಾದ ನಾಯಕ ಕಲ್ಯಾಣ್ ದೇವ್ ಆಗಿದ್ದು, ಸಿನಿಮಾಗೆ ಪುಲಿ ವಾಸುದೇವ್ ಆಕ್ಷನ್ ಕಟ್ ಹೇಳಿದ್ದಾರೆ. ರಿಜ್ವಾನ್ ಬಂಡವಾಳ ಹೂಡಿದ್ದಾರೆ. ಎಸ್. ಎಸ್ ತಮನ್ ಮ್ಯೂಸಿಕ್ ನೀಡಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಚಿತ್ರರಂಗದ ಸ್ಟಾರ್ ಹೀರೋಯಿನ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಚಿತಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿರುವ ರಚಿತಾ ರಾಮ್ ಗೆ ತೆಲುಗು ಸಿನಿಮಾ ಪ್ರೇಮಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಚಿತ್ರ ಬಿಡುಗಡೆಯಾದ ಬಳಿಕ ತಿಳಿದು ಬರಲಿದೆ.
ಕೆಲ ದಿನಗಳ ಹಿಂದೆ ರಚಿತಾ ರಾಮ್ ನಟನೆಯ ‘ ಲವ್ ಯೂ ರಚ್ಚೂ ‘ ಚಿತ್ರ ಬಿಡುಗಡೆ ಆಗಿದೆ. ಅಜಯ್ ರಾವ್ ಹೀರೋ ಆಗಿರುವ ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ.
ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ದರ್ಶನ್ ಅವರಂಥ ದೊಡ್ಡ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರು ದರ್ಶನ್ ನಟನೆಯ ಕ್ರಾಂತಿ, ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
____






Be the first to comment