ಕನ್ನಡದ ಜನಪ್ರಿಯ ನಟಿ ರಚಿತಾ ರಾಮ್ ಅವರು ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಿಂದ ಹೊರ ಬಂದಿದ್ದಾರೆ.
ಗರಡಿ ಚಿತ್ರಕ್ಕೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣಕ್ಕೆ ರಚಿತಾ ಹೊರ ಬಂದಿದ್ದಾರೆ. ಇದು ಚಿತ್ರತಂಡಕ್ಕೂ ನಿರಾಸೆ ತಂದಿದೆ. ಅನಿವಾರ್ಯವಾಗಿ ಚಿತ್ರತಂಡ ಈಗ ರಚಿತಾ ರಾಮ್ ಜಾಗಕ್ಕೆ ಮತ್ತೋರ್ವ ನಟಿಯನ್ನು ಫೈನಲ್ ಮಾಡಿದೆ.
ರಚಿತಾ ರಾಮ್ ಅವರ ಜಾಗಕ್ಕೆ ನಟಿ ಸೋನಾಲ್ ಮೊಂತೆರೋ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಪಂಚತಂತ್ರ ಚಿತ್ರದಲ್ಲಿ ನಟಿಸಿದ್ದ ಸೋನಾಲ್ ಈಗ ಯೋಗರಾಜ್ ಭಟ್ ಜೊತೆ ಸೋನಾಲ್ ಮೊಂತೆರೋ ಎರಡನೇ ಚಿತ್ರ ಮಾಡುತ್ತಿದ್ದಾರೆ.
ಸೋನಾಲ್ ಮಂತೆರೋ ರಾಬರ್ಟ್ ಚಿತ್ರದಲ್ಲಿ ವಿನೋದ್ ಪ್ರಭಾಕರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅವರು ಜಯತೀರ್ಥ ನಿರ್ದೇಶನದ ‘ಬನಾರಸ್’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ‘ಶಂಭೋ ಶಿವ ಶಂಕರ’, ‘ಶುಗರ್ ಫ್ಯಾಕ್ಟರಿ’, ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’, ‘ಬುದ್ದಿವಂತ 2’ ಸಿನಿಮಾಗಳಲ್ಲಿ ಸೋನಾಲ್ ನಟಿಸುತ್ತಿದ್ದಾರೆ.
ಗರಡಿ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ಈ ವಾರ ಆರಂಭವಾಗಲಿದೆ. ಇದು ಕಮರ್ಷಿಯಲ್ ಎಂಟರ್ಟೈನ್‌ಮೆಂಟ್ ಸಿನಿಮಾ ಆಗಿದ್ದು, ಚಿತ್ರವನ್ನು ಸಚಿವ ಬಿ.ಸಿ. ಪಾಟೀಲ್ ನಿರ್ಮಿಸುತ್ತಿದ್ದಾರೆ. ಗರಡಿ ಚಿತ್ರದ ನಾಯಕ ಯಶಸ್ ಸೂರ್ಯ ಆಗಿದ್ದಾರೆ.
ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಕುಸ್ತಿ ಗರಡಿ ಮನೆಯ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು ಕುತೂಹಲ ಮೂಡಿಸಿದೆ.
___





Be the first to comment