ರಚಿತಾ

ತಿರುಗೇಟು ನೀಡಿದ ರಚಿತಾ ರಾಮ್

‘ಸಂಜು ವೆಡ್ಸ್‌ ಗೀತಾ-2’  ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗದೇ ಇರೋದು ಹಾಗೂ ಉಪ್ಪಿ ರುಪೀ ಸಿನಿಮಾಗೆ ಹಣ ತೆಗೆದುಕೊಂಡು ಡೇಟ್ಸ್‌ ನೀಡಿಲ್ಲ ಎಂಬ ಆರೋಪಗಳ ಬಗ್ಗೆ ರಚಿತಾ ರಾಮ್ ಮಾತನಾಡಿದ್ದು, ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.

ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಮಾಡುವ ಮೂಲಕ  ರಚಿತಾ ರಾಮ್‌ ತಿರುಗೇಟು ನೀಡಿದ್ದಾರೆ. ನಾನು ಈ ಸಿನಿಮಾಗೆ ಏನು ಮಾಡಬೇಕು ಅಂತಾ ಇದ್ದೆನೋ ಅದೆಲ್ಲವನ್ನೂ ಸಂಪೂರ್ಣವಾಗಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಸಂಜು ವೆಡ್ಸ್ ಗೀತಾ ಸಿನಿಮಾ ಶೂಟಿಂಗ್‌ ನಡೆಯುವಾಗ ನನ್ನ ಇನ್ನೊಂದು ಸಿನಿಮಾ ರಿಲೀಸ್‌ಗೆ ರೆಡಿ ಇರುತ್ತೆ.   ಇಡೀ ಚಿತ್ರತಂಡ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿತ್ತು. ನಿರ್ಮಾಪಕ, ನಿರ್ದೇಶಕರು ನನಗೆ, ನನ್ನ ಮ್ಯಾನೇಜರ್‌ಗೆ ಕಾಲ್‌ ಮಾಡ್ತಾ ಇದ್ದರು. ಒಂದು ದಿನ ಪ್ರಮೋಷನ್‌ಗೆ ಬನ್ನಿ ಅಂತಾ ಕೇಳ್ತಿದ್ದರು. ಆಗ ನಾನು ನಾಗಶೇಖರ್‌ ಸರ್‌ ಹಾಗೂ ಕಿಟ್ಟಿ ಅವರಿಗೆ ಕೋಆರ್ಡಿನೇಟ್‌ ಮಾಡುತ್ತಿದ್ದೆ. ಆದರೆ ಒಂದೇ ಒಂದು ದಿನ ನನ್ನ ಟೀಮ್‌ ಜೊತೆ ಪ್ರಮೋಷನ್‌ಗೆ ಹೋಗೋಕೆ ಇವರು ಬಿಡಲಿಲ್ಲ. ಇದನ್ನ ಮಾಡಿದ್ದು ಯಾಕೆ? ಆ ನಿರ್ಮಾಪಕರು ಸಿನಿಮಾಗೆ ಹಾಕಿದ್ದು ಹಣವಲ್ಲವೇ? ಅವರು ಲೇಡಿ ಪ್ರೊಡ್ಯೂಸರ್‌. ಅವರದು ಸಿನಿಮಾ ಅಲ್ವಾ? ನನ್ನನ್ನು ಒಂದು ದಿನ ಆ ಸಿನಿಮಾದ ಪ್ರಮೋಷನ್‌ಗೆ ಇವರು ಕಳಿಸಲಿಲ್ಲ. ಇವತ್ತು ನಾನು ಇವರ ಸಿನಿಮಾ ಪ್ರಮೋಷನ್‌ಗೆ ಬರುತ್ತಿಲ್ಲ ಅಂತಾ ಹೇಳ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಬಾರಿ ನನಗೆ ಬೇರೆ ಸಿನಿಮಾ ಕಮೀಟ್‌ಮೆಂಟ್‌ ಇರುತ್ತೆ. ಅಂದು ಅವರು ಏನು ಮಾಡಿದ್ದರೋ ಇಂದು ಈಗ ಸಿನಿಮಾ ಶೂಟಿಂಗ್‌ ಮಾಡುತ್ತಿರುವ ತಂಡ  ಅದನ್ನೇ ಹೇಳುತ್ತಿದ್ದೆ. ಅದು ರೀರಿಲೀಸ್‌ ಆಗುತ್ತಿರುವ ಸಿನಿಮಾ. ನಮ್ಮದು ಲೊಕೇಷನ್‌ ಸಮಸ್ಯೆ ಇದೆ. ಈ ಡೇಟ್ಸ್‌ ಕೊಟ್ಟಿದ್ದೀರಿ ಮುಗಿಸಿಬಿಡಿ ಎಂದು ಹೇಳುತ್ತಿದ್ದಾರೆ. ಇಷ್ಟೇ ವಿಚಾರ. ನಾನು ತಪ್ಪು ಮಾಡಿದ್ದೇನೋ? ಇಲ್ಲವೋ ಅನ್ನೋದನ್ನು ನೀವು ಹೇಳಿ. ನನಗೆ ನಾನು ತಪ್ಪು ಮಾಡಿದ್ದೀನಿ ಎಂದು ಅನಿಸುತ್ತಿಲ್ಲ. ನಾನು ಎಲ್ಲಾ ಪ್ರಮೋಷನ್‌ ಕಾರ್ಯಕ್ರಮದಲ್ಲೂ ಇದ್ದೆ. ರೀರಿಲೀಸ್‌ ಸಮಯದಲ್ಲಿ ನನಗೆ ನನ್ನ ಸಿನಿಮಾದ ಕಮೀಟ್‌ಮೆಂಟ್‌ ಇದ್ದವು. ಆದರೆ ಪ್ರತಿದಿನ ನನ್ನ ಸೋಶಿಯಲ್‌ ಮೀಡಿಯಾದಲ್ಲಿ ಇದರ ಬಗ್ಗೆ ಅಪ್‌ಡೇಟ್‌ ನೀಡುತ್ತಿದೆ. ಕೊನೇ ಕ್ಷಣದಲ್ಲಿ ಅವರುಗಳು ಮಾಡಿದ ಬದಲಾವಣೆಗೆ ನಾನು ಹೊಣೆಗಾರಳಾಗಲು ಹೇಗೆ ಸಾಧ್ಯ? ಇದಕ್ಕೆ ನಾನು ಏನು ಹೇಳಬೇಕು ಅನ್ನೋದು ನನಗೆ ಗೊತ್ತಿಲ್ಲ ಎಂದರು.

ಸಿನಿಮಾ ಹಣ ತಗೊಂಡು ನಾನು ಡೇಟ್ಸ್‌ ಕೊಟ್ಟಿಲ್ಲ ಅನ್ನೋ ವಿಚಾರದ ಬಗ್ಗೆ ನಾನು ಮಾತಾಡೋ ಹಾಗೆ ಇಲ್ಲ.  ಈ ವಿಚಾರ  ಸಾ ರಾ ಗೋವಿಂದು ಸರ್‌  ಹ್ಯಾಂಡಲ್‌ ಮಾಡ್ತಾ ಇದ್ದಾರೆ. ಅವರ ಫಿಲ್ಮ್‌ ಚೇಂಬರ್‌ಗೆ ಈ ವಿಚಾರ ಹೋಗಿದೆ. ಅವರು ಹೇಳೋವರೆಗೂ ಇದರ ಬಗ್ಗೆ ಮಾತನಾಡುವಂತಿಲ್ಲ ಎಂದಿದ್ದಾರೆ. ಅದಕ್ಕೆ ಗೌರವ ನೀಡ್ತೀನಿ. ನಾನು ತಪ್ಪು ಅಂತಾ ಮಾಡಿದ್ದರೆ ಚಿಕ್ಕ ಮಕ್ಕಳ ಕಾಲಿಗೂ ಬೀಳ್ತೇನೆ. ನಾನು ತಪ್ಪು ಮಾಡಿಲ್ಲ ಅಂದ್ರೆ ದೇವ್ರೆ ಮುಂದೆ ನಿಂತ್ರೂ ನಾನು ಕ್ಷಮೆ ಕೇಳೋದಿಲ್ಲ. ನನ್ನ ಅಭಿಮಾನಿಗಳಿಗೆ ಏನಾದರೂ ಇದರಿಂದ ಬೇಸರವಾಗಿದ್ದರೆ ನನ್ನ ಕ್ಷಮೆ ನಿಮಗೆ ಮಾತ್ರ ಇರಲಿದೆ ಎಂದು ರಚಿತಾ  ಹೇಳಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!