ರಚಿತಾ

ಮದುವೆ ಆಗುತ್ತೇನೆ ಎಂದ ರಚಿತಾ

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಇಂದು  ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿದ್ದು,  ಮದುವೆ ಆಗುತ್ತೇನೆ. ಆ ಯೋಚನೆ ಬಂದಿದೆ ಎಂದು ಹೇಳಿದ್ದಾರೆ.

ಮಧ್ಯರಾತ್ರಿಯಿಂದ ರಚಿತಾ ಅವರು ತಮ್ಮ ಕುಟುಂಬ ಸದಸ್ಯರು, ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳು  ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭ ರಚಿತಾ ರಾಮ್, ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆ ಯೋಚನೆ ಕೂಡ ಬಂದಿದೆ ಎಂದು ಹೇಳಿದ್ದಾರೆ.

”ತಂದೆ-ತಾಯಿಗೂ ಹೇಳಿದ್ದೇನೆ. ಹುಡುಗನನ್ನು ನೋಡಲು ಶುರು ಮಾಡಿದ್ದಾರೆ. ಇಂಥದ್ದೇ ಕ್ವಾಲಿಟಿ ಅಂತೇನೂ ಇಲ್ಲ. ಯಾರನ್ನೇ ಕರೆದುಕೊಂಡು ಬಂದು ಮದುವೆಯಾಗು ಎಂದರೆ ಆಗುತ್ತೇನೆ. ದೇವರು ಯಾರನ್ನು ಕಳಿಸುತ್ತಾನೋ ಅವರನ್ನು ನಾನು ಅಕ್ಸೆಪ್ಟ್​ ಮಾಡುತ್ತೇನೆ”  ಎನ್ನುವ ಮೂಲಕ ಮದುವೆ ಹುಡುಗನ ಆಯ್ಕೆ ಸಂಪೂರ್ಣ ಜವಾಬ್ದಾರಿಯನ್ನು ಪಾಲಕರ ಮೇಲೆ ಬಿಟ್ಟಿದ್ದಾರೆ.

ಮೊದಲ ಬಾರಿಗೆ ಅಪ್ಪ-ಅಮ್ಮನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಚಿತಾ ರಾಮ್,   ಪೌರ ಕಾರ್ಮಿಕರಿಗೆ ಕಿಟ್​ ವಿತರಣೆ ಮಾಡಿದರು.

2011ರ ‘ಬೆಂಕಿಯಲ್ಲಿ ಅರಳಿದ ಹೂವು’ ರಚಿತಾ  ನಟನೆಯ ಮೊದಲ ಧಾರಾವಾಹಿ.  ಆ ಬಳಿಕ  ರಚಿತಾ ರಾಮ್   ‘ಬುಲ್ ಬುಲ್’ ಸಿನಿಮಾದಲ್ಲಿ ಕಾಣಿಸಿಕೊಂಡರು. ರಚಿತಾ ಅವರು ಇತ್ತೀಚೆಗೆ  ‘ಕೂಲಿ’ ಸಿನಿಮಾದಲ್ಲಿ ನಟಿಸಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!