ಸಿದ್ದುವಜ್ರಪ್ಪ ನಿರ್ದೇಶನದ ರಾವುತ ಚಿತ್ರದ ಮುಹೂರ್ತ ಶ್ರೀರಾಮಪುರ ಶಕ್ತಿ ಗಣಪತಿಯ ದೇವಾಲಯದಲ್ಲಿ ನಡೆಯಿತು.
ಕ್ಲ್ಯಾಪ್ ನ್ನು ಸಮಾಜ ಸೇವಕ ಮಹಮದ್ ಇಕ್ಬಾಲ್ ಅವರು ಮಾಡಿದರು. ರಾಣಿ ಗಿರೀಶ್ ರಾಜ್ ಅವರು ಕ್ಯಾಮರ ಚಾಲನೆ ಮಾಡಿದರು.
ಸಾಂಸಾರಿಕ ಮತ್ತು ಜ್ಞಾನದ ಬವಣೆಯಲ್ಲಿರುವ ವ್ಯಕ್ತಿಯ ಕತೆ ಈ ಸಿನಿಮಾ ಆಗಿದೆ ಎಂದು ಚಿತ್ರತಂಡ ತಿಳಿಸಿದೆ.
ತಾರಾಗಣದಲ್ಲಿ ನಾಯಕನಾಗಿ ರಾಜ್ ಪ್ರವೀಣ್ ನಾಯಕಿಯಾಗಿ ಶಿಮ್ರಾನ್ ಕೌರ್ ಇದ್ದಾರೆ. ಸಹ ಕಲಾವಿದರಾಗಿ ನರಸಿಂಹ ಕುಣಿಗಲ್ ,ಹರ್ಷವರ್ಧನ್ , ಪ್ರತಾಪ್ ಮುಂತಾದವರು ನಟಿಸಲಿದ್ದಾರೆ.
ಚಿತ್ರಕ್ಕೆ ಸುಚಿಂದ್ರ ಶರ್ಮ ಸಂಗೀತ, ವಿ ಮನೋಹರ್ ಸಾಹಿತ್ಯ ಇದೆ. ಡಾ. ಕೆ. ಗಿರೀಶ್ ರಾಜ್ ಚಿತ್ರದ ನಿರ್ಮಾಪಕ ಆಗಿದ್ದಾರೆ. ಮರೇಶ್ ಕನಕಗಿರಿ ಸಹ ನಿರ್ಮಾಪಕ ಆಗಿದ್ದಾರೆ.
30 ದಿನಗಳ ಚಿತ್ರೀಕರಣ ಮಾಡಿರುವ ಚಿತ್ರತಂಡ ಮುಂದಿನ ಕೆಲಸಕ್ಕೆ ಅಣಿಯಾಗಲಿದೆ.





Be the first to comment