ಸ್ಟಾರ್ ಡೈರೆಕ್ಟರ್ ಒಬ್ಬರು ಇನ್ನೊಬ್ಬ ಸ್ಟಾರ್ ಡೈರೆಕ್ಟರ್‍ಗೆ ಡೈರೆಕ್ಟ್ ಮಾಡಿರೋ ಸಿನಿಮಾ ಹೇಗಿರಬಹುದು? ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೇ ಸ್ಟಾಂಪ್ ಒತ್ತಿರುವ ಆ ಡೈರೆಕ್ಟರ್ ಸೂಪರ್‍ಸ್ಟಾರ್ ಮೂಲಕ ಎಂಥಹ ಕಥೆಯನ್ನು ಹೇಳಲು ಹೊರಟಿರಬಹುದು?.. ಹೌದು, ನಿಮ್ಮ ಗೆಸ್ ಕರೆಕ್ಟ್ ಆಗಿದೆ ನಾವು ಹೇಳಲು ಹೊರಟಿರೋದು ಸ್ಟಾರ್ ಡೈರೆಕ್ಟರ್, ಪ್ರೋಡ್ಯೂಸರ್ ಆರ್.ಚಂದ್ರು ಮತ್ತು ಸೂಪರ್‍ಸ್ಟಾರ್ ಉಪೇಂದ್ರ ಕಾಂಬಿನೇಶನ್‍ನ ಚಿತ್ರ `ಐಲವ್‍ಯೂ’ ಬಗ್ಗೆ.
ಲವ್‍ಸ್ಟೋರಿಯನ್ನಿಟ್ಟುಕೊಂಡು `ಹೀಗೂ ಚಿತ್ರ ಮಾಡಬಹುದು’ ಎಂದು ತಮ್ಮದೆ ಆದ ಬ್ರಾಂಡ್ ಚಿತ್ರಗಳ ಮೂಲಕ ಫೇಮಸ್ ಆದವರು ಉಪ್ಪಿ. ಈಗ ಇದೇ ಉಪ್ಪಿಗೇ ಡೈರೆಕ್ಟ್ ಮಾಡಿ ವಿಭಿನ್ನ ಲವ್‍ಸ್ಟೋರಿಯೊಂದನ್ನು ಚಂದ್ರು ಹೇಳಲು ಹೊರಟಿರೋದು ಚಿತ್ರದ ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ. ಚಿತ್ರದ ಪೋಸ್ಟರ್&ಟ್ರೈಲರ್ ನೋಡಿದರೆ ಚಂದ್ರು, ಉಪ್ಪಿಯ ಸೂಪರ್‍ಹಿಟ್ ಚಿತ್ರಗಳ ಜಾನರ್‍ನದ್ದೇ ಚಿತ್ರವನ್ನು ತೆರೆಗೆ ತರಲಿರೋದು ಖಾತ್ರಿಯಾಗುತ್ತೆ. ಹಾಗೆನೋಡಿದರೆ, ಲವ್‍ಸ್ಟೋರಿಯ ವಿಚಾರಕ್ಕೆ ಬಂದರೆ ಉಪ್ಪಿ ತಮ್ಮನ್ನು ತಾವೇ ಸಾಕಷ್ಟು ಡಿಫೆರೆಂಟ್ ಲುಕ್‍ಗಳಲ್ಲಿ, ಪರ್‍ಫಾಮೆನ್ಸ್‍ಗಳಲ್ಲಿ ಪ್ರೂವ್ ಮಾಡಿಕೊಂಡಿದ್ದಾರೆ. ಹೀಗಿರುವಾಗ ಚಂದ್ರುಗೆ `ಐಲವ್‍ಯೂ’ ಮೂಲಕ ಉಪ್ಪಿಯನ್ನು ಬೇರೆದೇ ರೀತಿಯಲ್ಲಿ ಪ್ರಸೆಂಟ್ ಮಾಡುವಂತಹ ಚಾಲೆಂಜ್ ಎದುರಿಗಿದೆ.ಲವ್‌ಸ್ಟೋರಿ ಚಿತ್ರಗಳ ಮೂಲಕವೇ ಹೆಸರಾದವರು ಚಂದ್ರು. ತಾಜ್ ಮಹಲ್, ಚಾರ್ ಮಿನಾರ್, ಪ್ರೇಮ್ ಕಹಾನಿ ಹೀಗೆ ಹಿಟ್ ಚಿತ್ರಗಳನ್ನು ಕೊಟ್ಟವರು. ಈ ಹಿಂದೆ ಉಪೇಂದ್ರ ಜತೆ ಬ್ರಹ್ಮ ಸಿನಿಮಾ ಮಾಡಿದ್ದಾರೆ. ಹೀಗಾಗಿ, ಎದುರಿರುವ ಚಾಲೆಂಜ್ ಅನ್ನು ಚಂದ್ರು ಸಮರ್ಥವಾಗಿಯೇ ನಿಭಾಯಿಸಿರುತ್ತಾರೆ. ಇದರಿಂದ ಉಪೇಂದ್ರ ನಿರ್ದೇಶನದ ಶೈಲಿಯ ಚಿತ್ರವನ್ನು ಉಪ್ಪಿ ಅಭಿಮಾನಿಗಳು ಚಂದ್ರು ಚಿತ್ರದಿಂದ ನಿರೀಕ್ಷಿಸಬಹುದು.
ಉಪ್ಪಿ&ಚಂದ್ರು ಕಾಂಬಿನೇಶನ್ ಬಹು ನಿರೀಕ್ಷಿತ ಚಿತ್ರ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿದ್ಧಗೊಂಡಿದೆ. ಈಗಾಗಲೇ ಎರಡು ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಿದ್ದು, ಉತ್ತಮ ವೀವ್ಸ್ ಕಂಡಿದೆ. ಉಪ್ಪಿಗೆ ಅವರಿಗೆ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಲ್ಲದೆ ಈ ಸಿನಿಮಾದ ಕಂಟೆಂಟ್ ಯುನಿವರ್ಸಲ್ ಆಗಿರೋದ್ರಿಂದ ಚಿತ್ರ ಎಲ್ಲ ಭಾಷೆಗಳಿಗೂ ಸಲ್ಲುತ್ತದೆ. ಹಾಗಾಗಿಯೇ ಕನ್ನಡದ ಜತೆಗೆ ತೆಲುಗಿನಲ್ಲಿಯೂ ಚಿತ್ರೀಕರಣ ಮಾಡಿದ್ದಾರೆ ಚಂದ್ರು. ಅಂದಹಾಗೆ, ಉಪ್ಪಿ ನಟನೆಯ ಸಿನಿಮಾಗಳು ಈ ಹಿಂದೆ ತೆಲುಗಿಗೆ ಡಬ್ ಆಗಿ ಯಶಸ್ಸು ಕಂಡಿವೆ. ಅಲ್ಲದೆ, ತೆಲುಗು ಸಿನಿಮಾಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ. ಇದರಿಂದ ಚಿತ್ರದ ನಿರ್ಮಾಪಕರೂ ಆಗಿರುವ ಚಂದ್ರು ತೆಲೆಗು ವರ್ಷನ್ `ಐಲವ್‍ಯೂ’ ನಿಂದಾಗಿ ಈಗಾಗಲೇ ಸೇಫ್ ಆಗಿದ್ದಾರೆ.
ಜೂನ್ 14ರಂದು ‘ಐ ಲವ್ ಯೂ’ ತೆರೆಗೆ ಬರುತ್ತಿದೆ. ಈಗಾಗಲೇ ತೆಲುಗಿನಲ್ಲಿ ಈ ಚಿತ್ರ ತೆರೆಕಾಣಿಸುವುದಕ್ಕೆ ಸಾಕಷ್ಟು ವಿತರಕರು ಮುಂದೆ ಬಂದಿರೋದು ಚಂದ್ರು ಪಟ್ಟ ಶ್ರಮಕ್ಕೊಂದು ಸಾರ್ಥಕತೆ ತಂದುಕೊಟ್ಟಿದೆ. ಈ ಹಿಂದೆ ‘ಕೆಜಿಎಫ್’ ಚಿತ್ರವು ದೊಡ್ಡಮಟ್ಟದಲ್ಲಿ ತೆರೆಕಂಡ ಕನ್ನಡ ಸಿನಿಮಾ ಎಂಬ ಖ್ಯಾತಿ ಪಡೆದಿತ್ತು. ಆ ಸಾಲಿಗೆ ಇದೀಗ ‘ಐ ಲವ್ ಯೂ’ ಸೇರಿಕೊಳ್ಳಲಿದೆ. ಒಬ್ಬ ಸಮಾನ್ಯ ರೈತನ ಮಗನಾಗಿದ್ದುಕೊಂಡು ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಂಟ್ಟು ಇಂದು ಸೂಪರ್‍ಸ್ಟಾರ್ ಚಿತ್ರವನ್ನು ಏಕಕಾಲಕ್ಕೆ ಸಾವಿರ ಥೀಯೆಟರ್‍ಗಳಲ್ಲಿ ರಿಲೀಸ್ ಮಾಡೋದು ಖಂಡಿತಾ ದೊಡ್ಡ ಸಾಹಸ. ಸದಾ ರಿಸ್ಕ್‍ಗಳನ್ನು ಮೈಮೇಲೆ ಎಳೆದುಕೊಂಡು ರಿಸ್ಕ್ ಅನ್ನು ಸಕ್ಸಸ್ ಆಗಿ ಪರಿವರ್ತಿಸುವ ವಿದ್ಯೆ ಈಗಾಗಲೇ ಚಂದ್ರು ಅವರಿಗೆ ಒಲಿದಿದೆ.
ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯರಾಗಿ ರಚಿತಾ ರಾಮ್ ಮತ್ತು ಸೋನು ಗೌಡ ನಟಿಸಿದ್ದಾರೆ. ಈ ಮೂಲಕ ಅವರಿಬ್ಬರು ತೆಲುಗು ಚಿತ್ರರಂಗಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ. ಚಂದ್ರು, ಕನ್ನಡ ಹಲವು ಪ್ರತಿಭೆಗಳನ್ನು ತೆಲುಗಿಗೆ ಪರಿಚಯಿಸಿ, ಇಲ್ಲಿನ ಪ್ರತಿಭೆಗಳಿಗೆ ಒಂದು ಉತ್ತಮ ಅವಕಾಶವನ್ನು ಕಲ್ಪಿಸಿದ್ದಾರೆ. ಕಿರಣ್ ತೋಟಂಬೈಲ್ ಅವರಿಂದ ಸಂಗೀತ ಮಾಡಿಸಿರುವ ಚಂದ್ರು ಈ ಮೂಲಕ ತಮ್ಮ ಸಂಗೀತ ಜ್ಞಾನವನ್ನೂ `ಐಲವ್‍ಯೂ’ನಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇನ್ನು ಸುಜ್ಞಾನ್ ಛಾಯಾಗ್ರಹಣ ಚಂದ್ರು ಮಾಡಲು ಹೊರಟಿರುವ ಅಸಮಾನ್ಯ ಸಾಹಸಕ್ಕೆ ಸಾಥ್ ನೀಡಲಿದೆ ಅನ್ನುವ ಹಿಂಟ್ ಅನ್ನು ಟ್ರೈಲರ್ ನೀಡುತ್ತದೆ.
ಒಟ್ಟಿನಲ್ಲಿ, ಯಾವುದೇ ಗಾಡ್‍ಫಾದರ್ ಇಲ್ಲದೆ, ಮಾಡೋ ಕೆಲಸಾನೆ ಗಾಡ್ ಎಂದು ನಂಬಿ ಪ್ರಾಮಾಣಿಕವಾಗಿ ಒಂದೊಳ್ಳೆ ಚಿತ್ರಕ್ಕಾಗಿ ಹಪಹಪಿಸುವ ಚಂದ್ರು ಅವರ ಪ್ರತಿಭೆಯನ್ನು `ಐಲವ್‍ಯು’ ಇನ್ನಷ್ಟು ಅನಾವರಣಗೊಳಿಸಲಿ, ಈ ಮೂಲಕ ಚಂದ್ರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮಂದಿಗೆ ಅನ್ನದಾತರಾಗಿ, ಕ್ರಿಯಾಶೀಲ ನಿರ್ದೇಶಕರಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ‘ಬಿಸಿನಿಮಾಸ್’ ತಂಡ ಹಾರೈಸುತ್ತದೆ.
Pingback: DevOps outsourcing model