‘ಸಿನಿಮಾ ಲವರ್ಸ್ ಡೇ’ ಪ್ರಯುಕ್ತ ಇಂದು ದೇಶಾದ್ಯಂತ ಪಿವಿಆರ್ ಮತ್ತು ಐನಾಕ್ಸ್ನಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ ನೋಡುವ ಆಫರ್ ನೀಡಲಾಗಿದೆ.
ಲಕ್ಷಾಂತರ ಪ್ರೇಕ್ಷಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗೋಲ್ಡ್ ಕ್ಲಾಸ್ ರೀತಿಯ ಐಷಾರಾಮಿ ಸೀಟ್ಗಳ ದರದಲ್ಲೂ ರಿಯಾಯಿತಿ ನೀಡಲಾಗಿದೆ.
ಪಿವಿಆರ್ ಮತ್ತು ಐನಾಕ್ಸ್ ಕಡೆಯಿಂದ ಫೆಬ್ರವರಿ 23ರಂದು ‘ಸಿನಿಮಾ ಲವರ್ಸ್ ಡೇ’ ಆಚರಿಸಲಾಗುತ್ತಿದೆ. ಈ ಪ್ರಯಕ್ತ ಪಿವಿಆರ್, ಐನಾಕ್ಸ್ನಲ್ಲಿ ಸಿನಿಮಾದ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಹಾಲಿವುಡ್ನಿಂದ ಸ್ಯಾಂಡವುಡ್ ತನಕ ಎಲ್ಲ ಸಿನಿಮಾಗಳ ಟಿಕೆಟ್ಗಳು ಕೇವಲ 99 ರೂಪಾಯಿಗೆ ಸಿಗುತ್ತಿವೆ. ಸಾಮಾನ್ಯ ದರ್ಜೆಯ ಸೀಟುಗಳಿಗೆ 99 ರೂಪಾಯಿ ಇದೆ. ಐಷಾರಾಮಿ ವಿಶೇಷ ಸೀಟ್ಗಳ ಬೆಲೆಯನ್ನೂ ತಗ್ಗಿಸಲಾಗಿದೆ.
ಇಂದು ಶುಕ್ರವಾರ ಆಗಿರುವುದರಿಂದ ಹೊಸದಾಗಿ ಬಿಡುಗಡೆಯಾದ ಸಿನಿಮಾಗಳ ಟಿಕೆಟ್ಗಳು ಕೂಡ ಪಿವಿಆರ್ ಹಾಗೂ ಐನಾಕ್ಸ್ನಲ್ಲಿ ಕೇವಲ 99 ರೂಪಾಯಿಗೆ ಸಿಗುತ್ತಿವೆ.
ಪಿವಿಆರ್ ಮತ್ತು ಐನಾಕ್ಸ್ನಲ್ಲಿ ಹಲವು ಸಿನಿಮಾಗಳು ಪ್ರದರ್ಶನ ಕಾಣುತ್ತಿದೆ. ಹೃತಿಕ್ ರೋಷನ್ ನಟನೆಯ ‘ಫೈಟರ್’, ಶಾಹಿದ್ ಕಪೂರ್ ಅಭಿನಯದ ‘ತೇರಿ ಬಾತೋ ಮೈ ಐಸಾ ಉಲ್ಜಾ ಜಿಯಾ’, ಪ್ರಿಯಾಮಣಿ ನಟಿಸಿರುವ ‘ಆರ್ಟಿಕಲ್ 370’, ವಿದ್ಯುತ್ ಜಾಮ್ವಾಲ್ ಅವರ ‘ಕ್ರ್ಯಾಕ್’, ತೇಜ ಸಜ್ಜಾ ನಟನೆಯ ‘ಹನುಮಾನ್’, ರಜನಿಕಾಂತ್ ಅಭಿನಯಿಸಿರುವ ‘ಲಾಲ್ ಸಲಾಂ’ ಸಿನಿಮಾಗಳು ಪ್ರದರ್ಶನವಾಗುತ್ತಿವೆ.
ಕನ್ನಡದ ‘ಒಂದು ಸರಳ ಪ್ರೇಮಕಥೆ’, ‘ಮಿಸ್ಟರ್ ನಟ್ವರ್ಲಾಲ್’, ‘ಫಾರ್ ರಿಜಿಸ್ಟ್ರೇಷನ್’ ಮುಂತಾದ ಸಿನಿಮಾಗಳನ್ನು ಇಂದು ಕೇವಲ 99 ರೂಪಾಯಿಗೆ ಪ್ರೇಕ್ಷಕರು ನೋಡಬಹುದು.
—–
Post Views:
134
Be the first to comment