'ಪುಷ್ಪ 2' ಟ್ರೈಲರ್ ಬಿಡುಗಡೆ

‘ಪುಷ್ಪ 2’ ಟ್ರೈಲರ್ ರಿಲೀಸ್ ಗೆ ಮುಹೂರ್ತ ಫಿಕ್ಸ್

ಅಲ್ಲು ಅರ್ಜುನ್ ಮತ್ತು ಸುಕುಮಾರ್ ಅವರ ಹೈ-ಬಜೆಟ್ ಪ್ಯಾನ್-ಇಂಡಿಯಾ ಆಕ್ಷನ್ ಡ್ರಾಮಾ, ‘ಪುಷ್ಪಾ ದಿ ರೂಲ್’  ಥಿಯೇಟ್ರಿಕಲ್ ಟ್ರೈಲರ್ ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

‘ಪುಷ್ಪ 2’ ಚಿತ್ರದ ಹೊಸ ಪೋಸ್ಟರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.  ಹೊಸ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಫಸ್ಟ್‌ ಹಾಫ್‌ ಲಾಕ್‌ ಮತ್ತು ಲೋಡ್‌ ಫುಲ್‌ ಫೈರ್‌ ಎಂದು ಶೀರ್ಷಿಕೆ ನೀಡಿದ್ದಾರೆ.

ದೇಶಾದ್ಯಂತ ಅತಿದೊಡ್ಡ ಪರಿಣಾಮವನ್ನು ಸೃಷ್ಟಿಸಲು ನಿರ್ದೇಶಕ ಸುಕುಮಾರ್ ‘ಪುಷ್ಪ 2’ ಟ್ರೈಲರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಪುಷ್ಪ 2’ ರ ಪ್ರಪಂಚ  ‘ಪುಷ್ಪಾ ದಿ ರೈಸ್‌’ಗಿಂತ ಕನಿಷ್ಠ ಹತ್ತು ಪಟ್ಟು ದೊಡ್ಡದಾಗಿದೆ ಮತ್ತು ಭವ್ಯವಾಗಿರಲಿದೆ.

‘ಪುಷ್ಪ 2’ ರಲ್ಲಿ ಫಹಾದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಭಾರತದ ಪ್ರಮುಖ ವಿತರಣಾ ಸಂಸ್ಥೆಗಳಾದ ಎಎ ಫಿಲಂಸ್ (ಹಿಂದಿ), ಇ 4 ಎಂಟರ್‌ಟೈನ್‌ಮೆಂಟ್ (ಮಲಯಾಳಂ), ಎನ್ ಸಿನಿಮಾಸ್ ( ಕನ್ನಡ), ಮತ್ತು AGS ಎಂಟರ್‌ಟೈನ್‌ಮೆಂಟ್ (ತಮಿಳು) ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!