ಪುಷ್ಪ 2 ಸ್ಟೋರಿ ಲೀಕ್!

ಬಾಲಿವುಡ್ ನಟ ರಣಬೀರ್ ಕಪೂರ್ ಪುಷ್ಪ 2 ಕಥೆಯನ್ನು ಲೀಕ್ ಮಾಡಿದ್ದಾರೆ.

ಶೂಟಿಂಗ್ ಲೊಕೇಷನ್ ನಲ್ಲಿ ರಣಬೀರ್ ಕಪೂರ್ ಪುಷ್ಪ 2 ಸಿನಿಮಾದ ಅಸಲಿ ಕಥೆಯನ್ನು ಬಹಿರಂಗಪಡಿಸಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಶ್ರೀವಲ್ಲಿ ಗರ್ಭಿಣಿಯಾಗಿದ್ದಾಗ ಸಾಯುತ್ತಾರೆ. ಆದ್ದರಿಂದ ಪುಷ್ಪರಾಜ್ ಸೇಡು ತೀರಿಸಿಕೊಳ್ಳುತ್ತಾರೆ ಎಂದಿದ್ದಾರೆ.

ಬಾಲಯ್ಯ ಶೋನಲ್ಲಿ ಪುಷ್ಪ 2 ಕುರಿತು ರಣಬೀರ್ ಮಾಡಿರುವ ಕಮೆಂಟ್ ಈಗ ವೈರಲ್ ಆಗುತ್ತಿದೆ. ಈಗ ಎಲ್ಲರೂ ಅದೇ ವಿಷಯವನ್ನು ಚರ್ಚಿಸುತ್ತಿದ್ದಾರೆ.  ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಗುರಿಯೊಂದಿಗೆ ತೆರೆಕಾಣುತ್ತಿದೆ. ಈ ಸಿನಿಮಾದ ಬಜೆಟ್ 350 ಕೋಟಿ ರು. ಎಂದು ವರದಿಯಾಗಿದೆ. 

ಪುಷ್ಪ 1 ಸಿನಿಮಾ ಹಿಂದಿ ಹಾಗೂ ತೆಲುಗಿನಲ್ಲಿ ಹಿಟ್ ಆಗಿತ್ತು. ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಐಕಾನ್ ಸ್ಟಾರ್ ಆದರು.

ಪುಷ್ಪ 2 ಸಿನಿಮಾದಲ್ಲಿ ಫಹದ್ ಫಾಜಿಲ್ ವಿಲನ್ ಆಗಿ ನಟಿಸುತ್ತಿದ್ದು, ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಕ್ಲೈಮ್ಯಾಕ್ಸ್‌ಗಾಗಿ ಸುಕುಮಾರ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಭನ್ವರ್ ಸಿಂಗ್ ಶೇಖಾವತ್ ಪಾತ್ರದ ಫಹಾದ್ ಫಾಜಿಲ್ ಅವರ ಲುಕ್ ನ್ನು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!