ಡಿಸೆಂಬರ್​ನಲ್ಲೂ ‘ಪುಷ್ಪ 2’ ರಿಲೀಸ್ ಡೌಟ್​!

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಈ ಮೊದಲು ಆಗಸ್ಟ್ 15 ರಂದು ಚಿತ್ರವನ್ನು ಬಿಡುಗಡೆ ಮಾಡಲು ಸಿನಿಮಾ ಟೀಮ್ ನಿರ್ಧರಿಸಿತ್ತು. ಆದರೆ ಕಾರಣಾಂತರಗಳಿಂದ ಡಿಸೆಂಬರ್ 6 ಕ್ಕೆ ಮುಂದೂಡಲಾಯಿತು. ಇದೀಗ ಮತ್ತೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಸಿನಿಮಾ ರಿಲೀಸ್ ವಿಚಾರಕ್ಕೆ ನಿರ್ದೇಶಕ ಸುಕುಮಾರ್ ಮೇಲೆ ಅಲ್ಲು ಅರ್ಜುನ್ ಸಿಟ್ಟಾಗಿದ್ದಾರೆ. ಪುಷ್ಪ 2 ಸಿನಿಮಾ ಶೂಟಿಂಗ್ ಬಳಿಕ ಅಲ್ಲು ಅರ್ಜುನ್, ಉದ್ದ ಗಡ್ಡ ತೆಗೆದು ಕುಟುಂಬ ಸಮೇತ ಟ್ರಿಪ್ ಹೋಗಿದ್ದಾರೆ.  ಮತ್ತೆ ಶೂಟಿಂಗ್ ಬಾಕಿ ಇದೆ ಎಂಬ ಮಾತು ಕೇಳಿ ಅಲ್ಲು ಅರ್ಜುನ್  ಕೋಪಗೊಂಡಿದ್ದಾರೆ. 

ಅಲ್ಲು ಮತ್ತೆ ಉದ್ದ ಗಡ್ಡದ ಲುಕ್ ಗೆ ಮರಳಲು ಕನಿಷ್ಠ ಒಂದು ತಿಂಗಳಾದರೂ ಬೇಕು.  ಈಗಾಗಲೇ ಒಂದು ತಿಂಗಳಿಗೂ ಹೆಚ್ಚು ಕಾಲ ಶೂಟಿಂಗ್ ಬಾಕಿ ಇದೆ ಎಂದು ಗೊತ್ತಾಗಿದೆ.  VFX ಮತ್ತು ಪ್ರಚಾರಗಳು ಕನಿಷ್ಠ ಎರಡರಿಂದ ಮೂರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಈ ಲೆಕ್ಕಾಚಾರದಲ್ಲಿ ಡಿಸೆಂಬರ್ ನಲ್ಲಿ ಪುಷ್ಪ 2 ರಿಲೀಸ್  ಡೌಟ್ ಎನ್ನಲಾಗಿದೆ.

‘ಪುಷ್ಪ ಭಾಗ-1’ ತೆರೆಗೆ ಬಂದು ಎರಡೂವರೆ ವರ್ಷ ಕಳೆದಿದೆ. ಅಭಿಮಾನಿಗಳು ಕೂಡ ಡೈರೆಕ್ಟರ್ ಮೇಲೆ ಕೋಪಗೊಂಡಿದ್ದಾರೆ. ರಾಜಮೌಳಿಯಂತಹ ನಿರ್ದೇಶಕರೇ ಎರಡು ವರ್ಷಗಳ ಅಂತರದಲ್ಲಿ ಬಾಹುಬಲಿ 2 ಬಿಡುಗಡೆ ಮಾಡಿದರು. ಆದ್ರೆ ಪುಷ್ಪ 2 ಸಿನಿಮಾ ರಿಲೀಸ್ ಯಾಕೆ ತಡವಾಗಿದೆ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.

ಪುಷ್ಪ 2 ಸಿನಿಮಾದ ಒಟಿಟಿ ಹಕ್ಕುಗಳು 250 ಕೋಟಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಸಿನಿಮಾದಲ್ಲಿ ಫಹದ್ ಫಾಜಿಲ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ನಾಯಕಿಯಾಗಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!