‘ಪುಷ್ಪ -2’ ರಿಲೀಸ್ ಡೇಟ್ ಫಿಕ್ಸ್!

ಬಹು ನಿರೀಕ್ಷಿತ ಚಿತ್ರ ‘ಪುಷ್ಪ 2: ದಿ ರೂಲ್’ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ.  ‘ಪುಷ್ಪ 2’ ಡಿಸೆಂಬರ್ 6, 2024 ಕ್ಕೆ ರಿಲೀಸ್ ಆಗಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ನಿರ್ಮಾಪಕರು ಹೊಸ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ.

‘ಪುಷ್ಪ 2’ ಕಳೆದ ಎರಡು ವರ್ಷಗಳಿಂದ ಬಹುನಿರೀಕ್ಷಿತ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ.  ಹಾಡುಗಳು ಮತ್ತು ಟೀಸರ್ ಸಿನಿಮಾದ ಬಗ್ಗೆ ನಿರೀಕ್ಷೆ ಮೂಡಿಸಿದೆ.  ‘ಪುಷ್ಪ 2: ದಿ ರೂಲ್’ ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಬಹುಮುಖ ನಟ ಫಹಾದ್ ಫಾಸಿಲ್ ಮುಖ್ಯ ಪಾತ್ರಗಳಲ್ಲಿದ್ದಾರೆ.

 ‘ಪುಷ್ಪ 2’ ಸಿನಿಮಾಗೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಮಾಡಿದೆ. ‘ಪುಷ್ಪ: ದಿ ರೂಲ್’ ಸಿನಿಮಾ ಬಿಡುಗಡೆಗೆ ಮುನ್ನವೇ 1,000 ಕೋಟಿ ರೂಪಾಯಿ ವ್ಯವಹಾರ ಮಾಡಿದೆ ಎನ್ನಲಾಗಿದೆ.

 ‘ಪುಷ್ಪ 2 ದಿ ರೂಲ್’ ಸಿನಿಮಾದ ಮೊದಲನೇ ಹಾಡು ‘ಪುಷ್ಪ – ಪುಷ್ಪಾ’ ಹಾಡಿನ ಮೂಲಕ ಸಿನಿಮಾದ ಎರಡನೇ ಅಧ್ಯಾಯದಲ್ಲಿ ಪುಷ್ಪ ರಾಜ್ ನ ಪಾತ್ರ ಹೇಗಿದೆ ಎನ್ನುವುದನ್ನು ತೋರಿಸಿದ್ದಾರೆ. ಎರಡನೇ ಹಾಡು ಸಿನಿಮಾದ ಒಂದು ರೊಮ್ಯಾಂಟಿಕ್ ಹಾಡಾಗಿದ್ದು,  ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿ ತೋರ್ಪಡಿಎರಡನೇ ಹಾಡು ಸಿನಿಮಾದ ಒಂದು ರೊಮ್ಯಾಂಟಿಕ್ ಹಾಡಾಗಿರಲಿದ್ದು,  ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿ ತೋರ್ಪಡಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!