Pushpa2: ರಶ್ಮಿಕಾ ಹುಟ್ಟುಹಬ್ಬದಂದು ಫಸ್ಟ್ ಲುಕ್ ರಿಲೀಸ್

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ಪುಷ್ಪಾ 2 ಚಿತ್ರತಂಡದಿಂದ ಉಡುಗೊರೆಯೊಂದು ಸಿಕ್ಕಿದೆ.

ರಶ್ಮಿಕಾ ಹುಟ್ಟು ಹಬ್ಬಕ್ಕಾಗಿ ಪುಷ್ಪಾ 2 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ವಿಶ್ ಮಾಡಲಾಗಿದೆ.

ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಯಾವ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಅಭಿಮಾನಿಗಳು ಈ ಲುಕ್ ಗೆ ಫಿದಾ ಆಗಿ, ಶುಭಾಶಯಗಳ ಸುರಿಮಳೆಗೈದಿದ್ದಾರೆ.

ಹುಟ್ಟು ಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ರಶ್ಮಿಕಾ ಧನ್ಯವಾದ ಅರ್ಪಿಸಿದ್ದಾರೆ. ಪುಷ್ಪಾ 2 ತಂಡಕ್ಕೆ ವಿಶೇಷ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿ ಕೆರಿಯರ್ ಶುರು ಮಾಡಿದ ರಶ್ಮಿಕಾ, ಸೌತ್- ಬಾಲಿವುಡ್‌ನಲ್ಲಿ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಶೈನ್ ಆಗಿದ್ದಾರೆ. ಈವರೆಗೂ 18 ಸಿನಿಮಾಗಳಲ್ಲಿ ನಟಿಸಿದ್ದು ಇದೀಗ `ರೈನ್‌ಬೋ’ ಮಹಿಳಾ ಪ್ರಧಾನ ಸಿನಿಮಾದ ಮೂಲಕ ಹೊಸ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ರಶ್ಮಿಕಾ ಕೂಡ ಪ್ರತಿಕ್ರಿಯೆ ನೀಡಿದ್ದು, ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಇದನ್ನು ಹುಡುಗಿಯ ದೃಷ್ಟಿಕೋನದಿಂದ ಚಿತ್ರೀಕರಿಸಲಾಗಿದೆ. ಈ ಪಾತ್ರವನ್ನು ಜೀವಂತಗೊಳಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!