ದೊಡ್ದ ಬಜೆಟ್ ನಲ್ಲಿ ತಯಾರಾಗಲಿದೆ ಪುಷ್ಪ 2

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರ 400 ಕೋಟಿ ಬಜೆಟ್‌ನಲ್ಲಿ ತಯಾರಾಗಲಿದೆ ಎಂದು ತಿಳಿದು ಬಂದಿದೆ.

‘ಪುಷ್ಪ’ ಚಿತ್ರಕ್ಕೆ 194 ಕೋಟಿ ಬಜೆಟ್ ಹಾಕಿ ಚಿತ್ರ ತಯಾರಿಸಲಾಗಿತ್ತು. ಮುಂದಿನ ಭಾಗಕ್ಕೆ 400 ಕೋಟಿ ಬಜೆಟ್ ಹಾಕಲಾಗುತ್ತದೆ ಎಂದು ಹೇಳಲಾಗುತ್ತಿದೆ. ‘ಪುಷ್ಪ 2’ ರಲ್ಲಿ ಯಾವುದೇ ಬಾಲಿವುಡ್ ಕಲಾವಿದರು ಇರುವುದಿಲ್ಲ ಎಂದು ತಿಳಿದು ಬಂದಿದೆ.

ಪುಷ್ಪ 2ಕ್ಕೆ ಸ್ಕ್ರಿಪ್‌ನ್ನು ನಿರ್ದೇಶಕ ಸುಕುಮಾರ್ ರೆಡಿ ಮಾಡಿದ್ದಾರೆ. ಜೂನ್ ಅಥವಾ ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಹಿಂದೆ ‘ಪುಷ್ಪ’ ದಲ್ಲಿ ಚಿತ್ರೀಕರಿಸಿದ್ದ ಅರಣ್ಯದಲ್ಲಿ ಬಹುತೇಕ ‘ಪುಷ್ಪ 2’ ಚಿತ್ರೀಕರಣ ನಡೆಯಲಿದೆ. ಮುಂದಿನ ವರ್ಷ ಜನವರಿ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಬಳಿಕ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳನ್ನು ಕನಿಷ್ಟ ನಾಲ್ಕು ತಿಂಗಳಲ್ಲಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

‘ಪುಷ್ಪ’ ಸಕ್ಸಸ್‌ ಆಗಿರುವ ಹಿನ್ನೆಲೆಯಲ್ಲಿ ಚಿತ್ರತಂಡ ‘ಪುಷ್ಪ 2’ ಸಿನಿಮಾವನ್ನು ಅದ್ಧೂರಿಯಾಗಿ ಮಾಡಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಸಾಕಷ್ಟು ಇದೆ. ನಿರೀಕ್ಷೆಗೆ ತಕ್ಕಂತೆ ಚಿತ್ರತಂಡ ಚಿತ್ರದ ಕೆಲಸಗಳನ್ನು ಪ್ರಾರಂಭಿಸಿದೆ.

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್‌ ಆಗಿ ಯಶಸ್ಸು ಕಂಡಿತ್ತು. ಚಿತ್ರತಂಡ ‘ಪುಷ್ಪ’ ಸಕ್ಸಸ್‌ ಆದ ಬಳಿಕ ‘ಪುಷ್ಪ 2’ ಮಾಡುವುದಾಗಿ ಘೋಷಣೆ ಮಾಡಿತ್ತು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!