ಪುಷ್ಪ2 ಚಿತ್ರ ದೇಶದಾದ್ಯಂತ ಭಾಷೆಗಳ ಗಡಿಯನ್ನು ಮೀರಿ ಯಶಸ್ಸು ಪಡೆಯಲಿದೆ ಎಂದು ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಹೇಳಿದ್ದಾರೆ.
ಬಹಳ ದೊಡ್ಡ ಪ್ರೇಕ್ಷಕರ ಬಳಗ ಇರುವ ಬಾಲಿವುಡ್ ಪ್ರವೇಶಿಸುವುದು ಅಸಾಧ್ಯ ಎಂದು ನಾನು ಭಾವಿಸಿದ್ದೆ. ಆದರೆ ಪುಷ್ಪ ಚಿತ್ರದ ಮೂಲಕ ದೇಶದ ಎಲ್ಲಾ ಪ್ರೇಕ್ಷಕರನ್ನು ರಂಜಿಸುವ ಆಸೆ ಈಡೇರುತ್ತದೆ ಎಂದು ಅವರು ಹೇಳಿದ್ದಾರೆ.
ಮುಂಬೈಯಲ್ಲಿ ನಡೆದ ಪ್ರಮೋಶನಲ್ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಪುಷ್ಪ 2 ಯಶಸ್ಸು ಆಗುವ ಮಾತನಾಡಿದ್ದಾರೆ. ಪುಷ್ಪ ಚಿತ್ರದಂತೆ ಪುಷ್ಪ2 ಯಶಸ್ಸು ಪಡೆಯಲಿದೆ. ಇಡೀ ಭಾರತ ನಮ್ಮಿಂದ ಈ ಚಿತ್ರವನ್ನು ನಿರೀಕ್ಷಿಸುತ್ತಿರುವುದು ನಮಗೆ ದೊಡ್ಡ ವಿಷಯ ಆಗಿದೆ ಎಂದು ಅವರು ಹೇಳಿದ್ದಾರೆ.
ಪುಷ್ಪ 2 ಚಿತ್ರ ಡಿಸೆಂಬರ್ 5ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ. ಈ ಹಿಂದೆ 2021ರಲ್ಲಿ ಬಿಡುಗಡೆ ಆಗಿದ್ದ ಪುಷ್ಪ ಸೂಪರ್ ಹಿಟ್ ಆಗಿತ್ತು.
ಪಾಟ್ನಾದಲ್ಲಿ ನಡೆದ ಪುಷ್ಪ 2 ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಪುಷ್ಪ ಮೊದಲ ಭಾಗದಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಪುಷ್ಪ 2 ಚಿತ್ರದಲ್ಲಿ ನಟಿಸಿದ್ದಾರೆ.

Be the first to comment