ಟ್ರೆಂಡಿಂಗ್​ನಲ್ಲಿ ‘ಪುಷ್ಪ 2’

ಜಾಗತಿಕ ಟಾಪ್​ 10 ಟ್ರೆಂಡಿಂಗ್​ನಲ್ಲಿ ‘ಪುಷ್ಪ 2’

ನೆಟ್​ಫ್ಲಿಕ್ಸ್ ಗ್ಲೋಬಲ್ ಟಾಪ್ 10 ಟ್ರೆಂಡಿಂಗ್​ನಲ್ಲಿ ‘ಪುಷ್ಪ 2’ ಸಿನಿಮಾ  ಸ್ಥಾನ ಪಡೆದುಕೊಂಡಿದೆ.

ವಿಶ್ವಾದ್ಯಂತ 1800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ‘ಪುಷ್ಪ 2’ ಒಟಿಟಿಯಲ್ಲಿ ಮಿಂಚುತ್ತಿದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲಿ ಇರುವ ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.

ಸಿನಿಮಾದ ಒಟಿಟಿ ಪ್ರಸಾರದ ಹಕ್ಕುಗಳನ್ನು ನೆಟ್​ಫ್ಲಿಕ್ಸ್ ಪಡೆದುಕೊಂಡಿದೆ. ಜನವರಿ 30ರಿಂದ ಒಟಿಟಿಯಲ್ಲಿ ‘ಪುಷ್ಪ 2’ ಸ್ಟ್ರೀಮ್ ಆಗುತ್ತಿದೆ. ನೆಟ್​ಫ್ಲಿಕ್ಸ್ ಗ್ಲೋಬಲ್ ಟಾಪ್ 10 ಟ್ರೆಂಡಿಂಗ್​ನಲ್ಲಿ ‘ಪುಷ್ಪ 2’ ಸಿನಿಮಾ  ಸ್ಥಾನ ಪಡೆದುಕೊಂಡಿದೆ.

ಚಿತ್ರಮಂದಿರದಲ್ಲಿ ಪ್ರೇಕ್ಷಕರು ನೋಡಿಲ್ಲದೇ ಇರುವ ಕೆಲವು ತುಣುಕುಗಳನ್ನು ಸೇರಿಸಿ ಒಟಿಟಿಯಲ್ಲಿ ‘ಪುಷ್ಪ 2’ ಬಿಡುಗಡೆ ಮಾಡಲಾಯಿತು. ಹೆಚ್ಚುವರಿ 23 ನಿಮಿಷಗಳ ದೃಶ್ಯಗಳನ್ನು ನೋಡಲು ಅನೇಕರು ಆಸಕ್ತಿ ತೋರಿಸಿದ್ದಾರೆ. ಈ ಕಾರಣದಿಂದ  ಒಟಿಟಿಯಲ್ಲಿ  ಸಿನಿಮಾದ ವೀಕ್ಷಣೆ ಹೆಚ್ಚಾಗಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಪಾಸಿಲ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.  ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ನಟನೆ, ಅದ್ದೂರಿ ಆ್ಯಕ್ಷನ್​ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಮನಸೋತಿದ್ದಾರೆ. ಸಿನಿಮಾದ ಗೆಲುವಿನಿಂದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜನಪ್ರಿಯತೆ ಜಾಸ್ತಿ ಆಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!