ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2’ ಸಿನಿಮಾ ಏಪ್ರಿಲ್ 13 ರ ಸಂಜೆ ಏಳು ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಸುಕುಮಾರ್ ನಿರ್ದೇಶನ ಮಾಡಿರುವ ‘ಪುಷ್ಪ 2’ ಸಿನಿಮಾ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆ ಆಗಿ ಹಲವು ದಾಖಲೆಗಳನ್ನು ಬರೆದಿದೆ. ಈ ಸಿನಿಮಾ ಇದೀಗ ಟಿವಿಯಲ್ಲಿ ಬಿಡುಗಡೆ ಆಗಲು ರೆಡಿಯಾಗಿದೆ.
ಮೊದಲ ಬಾರಿಗೆ ‘ಪುಷ್ಪ 2’ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗಲಿದ್ದು, ದಾಖಲೆ ಮೊತ್ತದ ಟಿಆರ್ಪಿಯನ್ನು ಬಾಚುವ ನಿರೀಕ್ಷೆ ಹುಟ್ಟಿಸಿದೆ. ಏಪ್ರಿಲ್ 13 ರಂದು ‘ಪುಷ್ಪ 2’ ಸಿನಿಮಾ ಟಿವಿಯಲ್ಲಿ ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ತೆಲುಗು, ಕನ್ನಡ, ತಮಿಳು ಇನ್ನೂ ಕೆಲ ಭಾಷೆಗಳಲ್ಲಿ ವಿವಿಧ ಚಾನೆಲ್ಗಳಲ್ಲಿ ಪ್ರದರ್ಶನವಾಗಲಿದೆ. ತೆಲುಗಿನಲ್ಲಿ ‘ಪುಷ್ಪ 2’ ಸ್ಟಾರ್ ಮಾನಲ್ಲಿ ಪ್ರದರ್ಶನಗೊಳ್ಳಲಿದೆ.
‘ಪುಷ್ಪ 2’ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್. ಸಿನಿಮಾದಲ್ಲಿ ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್, ಅನುಪಮಾ, ಶ್ರೀಲೀಲಾ ಇನ್ನೂ ಹಲವು ಪ್ರಮುಖ ನಟ, ನಟಿಯರು ನಟಿಸಿದ್ದಾರೆ.

Be the first to comment