ಪುಷ್ಪ 2 ಬಿಡುಗಡೆ ಯಾವಾಗ?

‘ಪುಷ್ಪ ‘ ಚಿತ್ರದ ಯಶಸ್ಸಿನ ಬಳಿಕ ‘ಪುಷ್ಪ 2’ ಚಿತ್ರವನ್ನು 2022ರ ಡಿಸೆಂಬರ್​ 17ರಂದು ರಿಲೀಸ್​ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದಕ್ಕಾಗಿ ಹೆಚ್ಚು ಕಾಳಜಿ ವಹಿಸಿ ಚಿತ್ರ ಶೂಟ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ. ಈಗಾಗಲೇ ಪುಷ್ಪ ಪಾರ್ಟ್​-2 ಸಹ ಸ್ವಲ್ಪ ಭಾಗ ಶೂಟಿಂಗ್​ ಆಗಿದೆ. ಅದರ ಜೊತೆಗೆ ಉಳಿದ ಎಲ್ಲಾ ಭಾಗವನ್ನು ಆದಷ್ಟು ಬೇಗ ಶೂಟ್​ ಮಾಡಿ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.

” ಪುಷ್ಪ ” ಚಿತ್ರ ಕಳೆದ ಡಿಸೆಂಬರ್ 17ಕ್ಕೆ ಬಿಡುಗಡೆ ಆಗಿ ಯಶಸ್ವಿ ಕಂಡಿತು. ಈಗ ಎರಡನೇ ಭಾಗವನ್ನು ಡಿಸೆಂಬರ್​ 17ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಸಿನಿಮಾವನ್ನು 2022ರ ಡಿಸೆಂಬರ್​ನಲ್ಲಿ ತೆರೆಗೆ ತರಲು ಸಿನಿಮಾ ತಂಡಕ್ಕೆ ಕೇವಲ 10 ತಿಂಗಳು ಮಾತ್ರ ಇದೆ. ಹತ್ತು ತಿಂಗಳಲ್ಲಿ ಶೂಟಿಂಗ್​, ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ ಕೆಲಸ, ಪ್ರಚಾರ ಕಾರ್ಯ ನಡೆಯಬೇಕಿದೆ. ಇದು ಚಿತ್ರತಂಡಕ್ಕೆ ಚಾಲೆಂಜಿಂಗ್​ ಆಗಿದ್ದು ಇದನ್ನು ಚಿತ್ರತಂಡ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

‘ಪುಷ್ಪ’ ಸಿನಿಮಾ ಅಲ್ಲು ಅರ್ಜುನ್​ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ಕೊಟ್ಟಿದೆ. ಯಾರೂ ಊಹಿಸದ ರೀತಿಯಲ್ಲಿ ಈ ಸಿನಿಮಾ ಕಲೆಕ್ಷನ್​ ಮಾಡಿದೆ. ಬಾಲಿವುಡ್​ ಒಂದರಲ್ಲೇ ಈ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಈ ಚಿತ್ರಕ್ಕೆ ಸುಕುಮಾರ್​ ಅವರ ನಿರ್ದೇಶನವಿದೆ. ರಶ್ಮಿಕಾ ಮಂದಣ್ಣ ಡಾಲಿ ಧನಂಜಯ್​, ಫಹಾದ್​ ಫಾಸಿಲ್​, ಜಗಪತಿ ಬಾಬು ಪ್ರಕಾಶ್​ ರಾಜ್​ ಮುಂತಾದ ಸ್ಟಾರ್​ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!