ಮಾನಸದೇವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮಾನಸ ಅವರು ನಿರ್ಮಿಸಿರುವ ಪುರಸೋತ್ ರಾಮ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಭುದೇವ್ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಪ್ರಭುದೇವ ಹಾಗೂ ಧ್ರುವ ಬರೆದಿದ್ದಾರೆ. ಸುದ್ದೋರಾಯ್ ಸಂಗೀತ ನೀಡಿದ್ದಾರೆ. ಕಿರಣ್ ಕುಮಾರ್ ಛಾಯಾಗ್ರಹಣ, ಚಂದನ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಾಜಕಿಶೋರ್, ಮದನ್ – ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್ ಗೌಡ, ಶಿವರಾಜ್ ಕೆ.ಆರ್ ಪೇಟೆ, ರಿತಿಕ್ ಸರು, ಸಹನ, ಮಾನಸ, ಅನುಷ ಪಕಾಲಿ, ಕುರಿ ಪ್ರತಾಪ, ಬ್ಯಾಂಕ್ ಜನಾರ್ದನ್, ಆರ್.ಟಿ.ರಮ ಮುಂತಾದವರಿದ್ದಾರೆ.
ಇದೊಂದು ಸಂಪೂರ್ಣ ಯುವಸಮೂಹದ ಚಿತ್ರ. ಜೀವನದಲ್ಲಿ ವಿದ್ಯೆ, ಬುದ್ಧಿ, ಜ್ಞಾನ ಎಲ್ಲವನ್ನೂ ಪಡೆದುಕೊಂಡಿದ್ದರೂ ಕೆಲಸ ಮಾಡುವ ಮನಸ್ಸಿಲ್ಲದೆ ಪುರುಸೋತ್‍ನಲ್ಲೇ ಕಾಲ ಕಳೆಯುವವರ ಕಥೆ ಹೊಂದಿರುವ ಚಿತ್ರವೇ ಪುರುಸೋತ್ ರಾಮ. ಈ ಚಿತ್ರದಲ್ಲಿ 25 ರಿಂದ 40 ವರ್ಷದ ಮೂವರ ನಿರ್ಲಿಪ್ತ ಮನೋಭಾವದ ವರು ಎಲ್ಲರನ್ನೂ ನಕಾರಾತ್ಮಕ ಟೀಕೆಗಳನ್ನು ಮಾಡುತ್ತಾ ಹೋದವರು ತಿಂಗಳಿಗೆ 15-20 ಸಾವಿರ ಸಂಬಳಕ್ಕೆ ಕೆಲಸ ಹೋಗಬೇಕಾ ಎಂದು ಕಾಲ ಕಳೆಯುವವರೂ ಕೊನೆಗೆ ಹೇಗೆ ಬುದ್ಧಿ ಕಲಿತು ಜವಾಬ್ದಾರಿಯುತ ವ್ಯಕ್ತಿಗಳಾಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ.ಚಿತ್ರಕ್ಕೆ ಫುಲ್‍ಬ್ಯುಸಿ ಎಂಬ ಅಡಿಬರಹ ಕೂಡ ಇದೆ.
ರಿಕಿತ್ ಸರು ಅವರು ಚಿತ್ರಕ್ಕೆ ಆಯಕ್ಷನ್ ಕಟ್ ಹೇಳುವುದೇ ಅಲ್ಲದೆ ಚಿತ್ರದ ನಾಯಕನಾಗಿಯೂ ನಟಿಸಿದ್ದಾರೆ. ಇನ್ನೆರಡು ಪ್ರಮುಖ ಪಾತ್ರಗಳಲ್ಲಿ ಶಿವರಾಜ್ ಕೆ.ಆರ್.ಪೇಟೆ ಹಾಗೂ ರವಿಶಂಕರ್‍ಗೌಡ ಅವರು ಮೂವತ್ತರ ಹಾಗೂ ಮಧ್ಯವಯಸ್ಕರ ಪಾತ್ರವನ್ನು ಪ್ರತಿನಿಧಿಸಲಿದ್ದಾರೆ. ಮಾನಸ, ರಕ್ಷಾ ಹಾಗ ಅನುಷಾ ಇವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಮಾನಸ ಅವರು ಈ ಚಿತ್ರದ ನಿರ್ಮಾಪಕಿಯೂ ಹೌದು.
Be the first to comment