ಪಪ್ಪಿ

ಕಾರ್ಮಿಕರ ಬದುಕಿನ ಕಥೆ ‘ಪಪ್ಪಿ’

ಚಿತ್ರ: ಪಪ್ಪಿ
ನಿರ್ದೇಶನ: ಆಯುಷ್ ಮಲ್ಲಿ
ನಿರ್ಮಾಣ: ಬಿ ಬಿ ಸಂಕನೂರು
ತಾರಾ ಬಳಗ: ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ದುರ್ಗಪ್ಪ ಕಂಬಳಿ, ರೇಣುಕಾ, ಕಾವ್ಯ ಹೊಸಪೇಟೆ ಇತರರು
ರೇಟಿಂಗ್: 3.5/5

ಉತ್ತರ ಕರ್ನಾಟಕ ಭಾಗದ ಕಾರ್ಮಿಕರ ಬದುಕನ್ನು ಕಟ್ಟಿಕೊಡುವ ಚಿತ್ರ ಈ ವಾರ ತೆರೆಗೆ ಬಂದಿರುವ ‘ ಪಪ್ಪಿ ‘.

ಬರಗಾಲದ ಸಮಸ್ಯೆಯಿಂದ ಉತ್ತರ ಕರ್ನಾಟಕದ ಕುಟುಂಬ ಕಟ್ಟಡ ಕೆಲಸ ಮಾಡಲು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುತ್ತದೆ. ಬೆಂಗಳೂರಿನಲ್ಲಿ ಸಣ್ಣ ಗುಡಿಸಲಿನಲ್ಲಿ ಅವರ ಬದುಕು ಆರಂಭವಾಗುತ್ತದೆ. ಗುಳೇ ಬಂದ ಕುಟುಂಬಗಳ ಬಾಲಕರಾದ ಪಾರ್ಶ್ಯಾ ಮತ್ತು ಆದಿಯ ಸ್ನೇಹ ಹಲವು ಕಥೆಗಳನ್ನು ಹೇಳುತ್ತದೆ. ಈ ನಡುವೆ ಪಪ್ಪಿ ಎಂಬ ನಾಯಿಮರಿ ಕಳೆದುಹೋಗುವ ಮೂಲಕ ಸಿನಿಮಾ ಮತ್ತೊಂದು ಮಗ್ಗುಲಿಗೆ ಹೊರಳುತ್ತದೆ.

ನಿರ್ದೇಶಕರು ಸಿನಿಮಾದಲ್ಲಿ ಉತ್ತರ ಕರ್ನಾಟಕದ ಜನರ ಬದುಕನ್ನು ತೆರೆದಿಡುವ ಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಸಂಭಾಷಣೆಗಳು ಉತ್ತರ ಕರ್ನಾಟಕದ ಸೊಗಡಿನಲ್ಲಿವೆ. ನೋಡುಗರಿಗೆ ಅಲ್ಲಿನ ಬೈಗುಳಗಳ ದರ್ಶನವೂ ಆಗುತ್ತದೆ.

ಬಾಲ ನಟನಾಗಿ ನಟಿಸಿರುವ ಜಗದೀಶ್ ಹಾಗೂ ಆದಿತ್ಯ ಚಿತ್ರದ ಉದ್ದಕ್ಕೂ ಆವರಿಸಿಕೊಂಡಿದ್ದಾರೆ. ದುರ್ಗಪ್ಪ ಕಂಬಳಿ ಹಾಗೂ ರೇಣುಕಾ ಅವರ ನಟನೆ ಚೆನ್ನಾಗಿ ಮೂಡಿ ಬಂದಿದೆ. ಸುರೇಶ್ ಬಾಬು ತಮ್ಮ ಛಾಯಾಗ್ರಹಣದ ಮೂಲಕ ಉತ್ತರ ಕರ್ನಾಟಕದ ಬದುಕನ್ನು ತೆರೆಯ ಮೇಲೆ ನೈಜವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!