ಗಂಧದ ಗುಡಿಯಲ್ಲಿ ಪುನೀತ್ ತಾವಾಗಿಯೇ ಕಾಣಿಸಿಕೊಂಡಿದ್ದಾರೆ: ಅಶ್ವಿನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಕನಸಿನ ಕೊನೆಯ ಚಿತ್ರ ಗಂಧದಗುಡಿ ಚಿತ್ರದಲ್ಲಿ ನಟಿಸುವ ಬದಲು ತಾವು ತಾವಾಗಿಯೇ ಕಾಣಿಸಿಕೊಂಡಿದ್ದಾರೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.

ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅವರ ಸಂದರ್ಶನದಲ್ಲಿ ಅಶ್ವಿನಿ ಮಾತನಾಡಿದ್ದು, ಶೂಟಿಂಗ್ ಸಂದರ್ಭದ ನಡೆದ ಕೆಲ ಘಟನೆ ಹಂಚಿಕೊಂಡಿದ್ದಾರೆ.

ಗಂಧದಗುಡಿ ಅಪ್ಪಾಜಿ, ಶಿವಣ್ಣ ಮಾಡಿದ್ದು ಅದರಲ್ಲಿ ಕಥೆ ಇತ್ತು, ಆದರೇ ಈ ಚಿತ್ರದಲ್ಲಿ ಜರ್ನಿನೇ ಸಿನಿಮಾ. ಚಿತ್ರದಲ್ಲಿ ಅವರು ಅವರಾಗೆ ಇದ್ದರು. ನನಗೆ ತುಂಬ ಹೆಮ್ಮೆ ಅನ್ನಿಸುತ್ತೆ. ನನ್ನ ಜೊತೆ ಟ್ರಕ್ಕಿಂಗ್ ಮಾಡಬೇಕೆಂದು ಅಪ್ಪು ಕಾಲ್ ಮಾಡಿದ್ರು. ನಾನು ಅವರ ತಂಡದ ಜೊತೆ ಟ್ರಕ್ಕಿಂಗ್ ಮಾಡಿದ್ದೆ. ಬಳಿಕ ಒಂದು ಸಣ್ಣ ಹಳ್ಳಿಯಲ್ಲಿ ಊಟ ಮಾಡಿಕೊಂಡು ಬಂದೆವು ಎಂದು ಗಂಧದಗುಡಿ ಚಿತ್ರದ ಚಿತ್ರೀಕರಣದ ನೆನಪು ಮೆಲುಕು ಹಾಕಿದ್ದಾರೆ.

ನನಗೆ ಹೆಮ್ಮೆ ಕೊಡುವ ಪ್ರಾಜೆಕ್ಟ್ ಅಂದ್ರೆ ಅದು ಗಂಧದಗುಡಿ. ಎಲ್ಲರೂ ಥಿಯೇಟರ್‍ಗೆ ಬಂದು ಚಿತ್ರ ವೀಕ್ಷಿಸಿ, ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನವಿ ಮಾಡಿದ್ದಾರೆ.

ಪುನೀತ್ ಪರ್ವ ಮಾಡಿದ್ದೇ ಅಭಿಮಾನಿಗಳು. ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಬಂದಿದ್ದರು. ನನಗೆ ತುಂಬಾ ಸಂತೋಷ ಆಯ್ತು. ತೃಪ್ತಿನೂ ಕೊಟ್ಟಿತ್ತು. ಅಭಿಮಾನಿಗಳಿಗೆ ನಮ್ಮ ಕುಟುಂಬ ಚಿರಋಣಿಯಾಗಿರುತ್ತೇವೆ. ಕಳೆದ ಒಂದು ವರ್ಷದಿಂದ ಸರ್ಕಾರ ನಮ್ಮ ಜೊತೆ ಇದೆ. ಎಲ್ಲರ ಬೆಂಬಲದಿಂದ ಕಾರ್ಯಕ್ರಮ ಚೆನ್ನಾಗಿ ಆಯ್ತು ಎಂದು ಅಶ್ವಿನಿ ಹೇಳಿದ್ದಾರೆ.

ಗಂಧದ ಗುಡಿ ಚಿತ್ರ ರಾಜ್ಯಾದ್ಯಂತ ನಾಳೆ ತೆರೆಗೆ ಬರುತ್ತಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!