ಇಂದು ಪುನೀತ್ ರಾಜ್ ಕುಮಾರ್ ಸ್ಮರಣೆ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಿಧನರಾಗಿ ಇಂದಿಗೆ ನಾಲ್ಕು ವರ್ಷ. ಪುನೀತ್ ಅವರ ಸಮಾಧಿ ಕಂಠೀರವ ಸ್ಟುಡಿಯೊ ಬಳಿ ಇಂದು ಅವರ ಕುಟುಂಬಸ್ಥರು, ಸಮೀಪದ ಬಂಧುಗಳು, ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ.

ಪುನೀತ್ ರಾಜ್​ಕುಮಾರ್ ಅಕ್ಟೋಬರ್ 29, 2021ರಂದು  ಬೆಳಗ್ಗೆ 11 ಗಂಟೆ ಸುಮಾರಿಗೆ ನಿಧನ ಹೊಂದಿದರು. ಅವರು 47ನೇ ವಯಸ್ಸಿನಲ್ಲಿ ಅಕಾಲಿಕವಾಗಿ ಹಠಾತ್ ನಿಧನರಾದಾಗ ಇಡೀ ರಾಜ್ಯ  ಶೋಕಸಾಗರದಲ್ಲಿ ಮುಳುಗಿತ್ತು.

2021ರ ಅಕ್ಟೋಬರ್ 29ರಂದು ಶಿವರಾಜ್​ಕುಮಾರ್ ನಟನೆಯ, ಹರ್ಷ ನಿರ್ದೇಶನದ ‘ಭಜರಂಗಿ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರಕ್ಕೆ ಪುನೀತ್ ರಾಜ್​ಕುಮಾರ್ ಅವರು ಟ್ವಿಟರ್ ಮೂಲಕ ವಿಶ್ ಮಾಡಿದರು. 10 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಉಂಟಾಗಿತ್ತು. ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಅವರು ನಿಧನ ಹೊಂದಿಯಾಗಿತ್ತು.

12 ಗಂಟೆ ವೇಳೆಗೆ ಅವರು ನಿಧನ ಹೊಂದಿದ್ದು ಖಚಿತವಾಗಿತ್ತು. ಆದರೆ  ಸರ್ಕಾರ  ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕ  ಈ ಸುದ್ದಿಯನ್ನು ಪ್ರಕಟಿಸಿತ್ತು.

ಪುನೀತ್ ನಿಧನದ ಬಳಿಕ ಪಿಆರ್​ಕೆ ಜವಾಬ್ದಾರಿ ಅಶ್ವಿನಿ ಅವರ ಹೆಗಲು ಏರಿದೆ.  ಪುನೀತ್ ನಿಧನದ ಬಳಿಕ ಪಿಆರ್​ಕೆಯಿಂದ ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಗಂಧದಗುಡಿ’, ‘ಆಚಾರ್ ಆ್ಯಂಡ್ ಕೋ’, ‘ಒ2’ ಹಾಗೂ ‘ಎಕ್ಕ’ ಸಿನಿಮಾಗಳು ಬಂದಿವೆ.  ಕೆಲವು ಕಥೆಗಳನ್ನು ಪುನೀತ್ ಅವರೇ ಫೈನಲ್ ಮಾಡಿದ್ದರೆ, ಇನ್ನೂ ಕೆಲವು ಕಥೆಗಳನ್ನು ಅಶ್ವಿನಿ ಅವರು ಫೈನಲ್ ಮಾಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!