ಪವರ್ ಸ್ಟಾರ್ ಹಾಡಿದ ಕೊನೆಯ ಸಾಂಗ್ ರಿಲೀಸ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಡಿದ ಕೊನೆಯ ಹಾಡು ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದೆ.

ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ ಚಿತ್ರ ‘ಹರೀಶ ವಯಸ್ಸು 36’ ಇದರ ಟೈಟಲ್ ಸಾಂಗ್ ನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಮದುವೆ ಆಗದೆ ಇರುವ ಹುಡುಗನ ಪಾಡನ್ನು ವಿವರಿಸುವ ಹಾಡು ತಮಾಷೆ ಆಗಿ ಮೂಡಿ ಬಂದಿದೆ. ಪುನೀತ್ ರಾಜ್ ಕುಮಾರ್ ಅವರು ಎಂಜಾಯ್ ಮಾಡಿಕೊಂಡು ಹಾಡಿದ್ದು, ಕೇಳುಗರಿಗೆ ಮುದ ನೀಡುತ್ತಿದೆ.

ಕನ್ನಡ ಸಿನಿಮಾ ರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುರುರಾಜ್ ಜ್ಯೇಷ್ಠ ‘ಹರೀಶ ವಯಸ್ಸು 36’ ಚಿತ್ರಕ್ಕೆ ಕಥೆ, ಚಿತ್ರಕಥೆ ಜೊತೆಗೆ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಹಿರಿಯ ಕಲಾವಿದ ಎಂ.ಎಸ್. ಉಮೇಶ್, ಯೋಗೀಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಾ ಅರೆಹೊಳೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ದಕ್ಷಿಣ ಕನ್ನಡದ ಕರಾವಳಿ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು ‘ಹರೀಶ ವಯಸ್ಸು 36’ ಸಿನಿಮಾವನ್ನು ತಯಾರಿ ಮಾಡಲಾಗಿದೆ. ಧರ್ಮಸ್ಥಳದ ಬಳಿ ಇರುವ 105 ವರ್ಷದಷ್ಟು ಹಳೆಯ ಗುತ್ತುಮನೆಯಲ್ಲಿ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ. ಚಿತ್ರದ ನಾಯಕ ಯೋಗೀಶ್ ಶೆಟ್ಟಿ ಈ ಸಿನಿಮಾದಲ್ಲಿ ಬಾಡಿಗೆ ಮನೆ ತೋರಿಸುವ ಬ್ರೋಕರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಜೋಸೆಫ್ ಮಾಸ್ಟರ್ ಪಾತ್ರ ಮಾಡಿದ್ದರು.

ಸಿನಿಮಾದ ನಾಯಕ ಹರೀಶ ಲ್ಯಾಂಡ್ ಬ್ರೋಕರ್ ಆಗಿದ್ದು, ಯಾವ ಹುಡುಗಿಯೂ ಅವನನ್ನು ಇಷ್ಟಪಡುವುದಿಲ್ಲ. ಸಿನಿಮಾದಲ್ಲಿ ಹರೀಶನನ್ನು ಪ್ರೀತಿಸುವ ಹುಡುಗಿ ಸಿಕ್ತಾಳಾ? ಮದುವೆ ಆಗುತ್ತದಾ ಎನ್ನುವುದನ್ನು ತೆರೆಯ ಮೇಲೆ ನೋಡಬೇಕಿದೆ.
ಈ ಸಿನಿಮಾ ರಿಲೀಸ್ ಆಗಲು ಸಜ್ಜಾಗಿದ್ದು, ಪ್ರೇಕ್ಷಕರನ್ನು ಯಾವ ರೀತಿ ಮೋಡಿ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!