ಅ.25ಕ್ಕೆ ಪಿಆರ್‌ಕೆ ಸ್ಟಾರ್ ಫ್ಯಾನ್ ಡಮ್ ಆ್ಯಪ್ ಬಿಡುಗಡೆ

ಕರ್ನಾಟಕ ರತ್ನ ಪುನೀತ್ ರಾಜ್​​ಕುಮಾರ್ ಅವರ ಸ್ಮರಣಾರ್ಥ ಪಿಆರ್‌ಕೆ ಸ್ಟಾರ್ ಫ್ಯಾನ್ ಡಮ್ ಆ್ಯಪ್ ಅಕ್ಟೋಬರ್ 25ರಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ.

ಪುನೀತ್ ರಾಜ್​​ಕುಮಾರ್ ಅವರ ಜನ್ಮ, ಬಾಲ್ಯಜೀವನ, ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಈ ಅಪ್ಲಿಕೇಶನ್ ನ್ನು ಬಳಸುವ ಯೋಜನೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರಿಗೆ ಇದೆ. ಕೆಲ ಉತ್ಸಾಹಿ ತಂಡದೊಂದಿಗೆ ಈಗಾಗಲೇ ಅಪ್ಲಿಕೇಶನ್ ಒಂದನ್ನು ರೂಪಿಸಿದ್ದು ಇಂದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ.

ಅಕ್ಟೋಬರ್ 25ರ ಅಪ್ಲಿಕೇಶನ್​​ನ ಲೋಕಾರ್ಪಣೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಆಹ್ವಾನಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​​ಕುಮಾರ್ ಅವರನ್ನೂ ಆಹ್ವಾನಿಸುವ ಸಾಧ್ಯತೆ ಇದೆ.

ಪುನೀತ್ ರಾಜ್​​ಕುಮಾರ್ ಅವರ ಸಿನಿಮಾಗಳು, ಜೀವನ, ಅವರ ಸಾಧನೆ, ಮಾನವೀಯ ಗುಣ, ಅವರ ಸಮಾಜ ಸೇವೆ ಇನ್ನಿತರೆಗಳ ಮಾಹಿತಿಯನ್ನು ಅಪ್ಲಿಕೇಶನ್ ಒಳಗೊಂಡಿದೆ. ಜೊತೆಗೆ ಅಂಗಾಂಗ ದಾನ, ಶಿಕ್ಷಣ, ಆರೋಗ್ಯ ಮಾಹಿತಿ ಮತ್ತು ಸೇವೆ ಇನ್ನಿತರೆ ಸೇವೆಗಳನ್ನು ಈ ಅಪ್ಲಿಕೇಶನ್ ಒಳಗೊಂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!