ಪುನೀತ್ ರಾಜ್ಕುಮಾರ್, ದರ್ಶನ್ ಮೊದಲ ಸಿನಿಮಾ ‘ಮೆಜೆಸ್ಟಿಕ್’ಗೆ ಸಹಾಯ ಮಾಡಿದ್ದರು ಎಂದು ಆ ಸಿನಿಮಾದ ನಿರ್ಮಾಪಕ ಭಾ ಮಾ ಹರೀಶ್ ಹೇಳಿದ್ದಾರೆ.
ಪುನೀತ್ ಅಗಲಿ ಇಂದಿಗೆ ಮೂರು ವರ್ಷ. ಪುನೀತ್ ರಾಜ್ಕುಮಾರ್ ವಿಷಯ ಬಂದಾಗ ದರ್ಶನ್ ಅಭಿಮಾನಿಗಳ ಮುಖ ಕೆಂಪಾಗುತ್ತದೆ. ದರ್ಶನ್ ಅಭಿಮಾನಿಗಳು ಸಾಮಾನ್ಯವಾಗಿ ಪುನೀತ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೂದಲಿಸುತ್ತಿರುತ್ತಾರೆ. ದರ್ಶನ್ ಇಂದು ಸ್ಟಾರ್ ಆಗಿ ಮೆರೆಯಲು ಕಾರಣವಾದ ಅವರ ಮೊದಲ ಸಿನಿಮಾ ‘ಮೆಜೆಸ್ಟಿಕ್’ಗೆ ಪುನೀತ್ ರಾಜ್ಕುಮಾರ್ ಸಹಾಯ ಮಾಡಿದ್ದರು ಎಂದು ಭಾ ಮಾ ಹರೀಶ್ ಎಂದಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಭಾ ಮಾ ಹರೀಶ್, ‘ಮೆಜೆಸ್ಟಿಕ್ ಸಿನಿಮಾದ ಚಿತ್ರೀಕರಣಕ್ಕೆ ಪೂರ್ಣಿಮಾ ಸಂಸ್ಥೆಯ ಯುನಿಟ್ ನ್ನು ಬಳಸಿಕೊಂಡಿದ್ದೆವು. ಅದನ್ನು ಪುನೀತ್ ಅವರೇ ನೋಡಿಕೊಳ್ಳುತ್ತಿದ್ದರು. ಚಿತ್ರೀಕರಣ ಮುಗಿದ ಮೇಲೆ ಹಣ ಸೆಟಲ್ ಮಾಡಲು ನಾನು ಅವರ ಕಚೇರಿಗೆ ಹೋದೆ. ಆಗ ಪುನೀತ್ ರಾಜ್ಕುಮಾರ್ ಇದ್ದರು’ ಎಂದು ಮಾತನಾಡಿದ್ದಾರೆ.
‘ನಾವು ತೂಗುದೀಪ ಶ್ರೀನಿವಾಸ್ ಮಗನನ್ನು ನಾಯಕನನ್ನಾಗಿ ಹಾಕಿಕೊಂಡು ಸಿನಿಮಾ ಮಾಡಿದ್ದೀವಿ ಎಂದು ಹೇಳಿದೆ. ಅದಕ್ಕೆ ‘ತೂಗುದೀಪ ಅಂಕಲ್ ನಮ್ಮವರು, ನಮ್ಮ ಮನೆ ಸದಸ್ಯರು’ ಎಂದು ಹೇಳಿ ನಮ್ಮಿಂದ ಬಹಳ ಕಡಿಮೆ ಹಣ ಪಡೆದುಕೊಂಡರು. ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು’ ಎಂದಿದ್ದಾರೆ.
‘ಮೆಜೆಸ್ಟಿಕ್’ ಸಿನಿಮಾ ಮಾಡುವ ಮುಂಚೆ ಆ ಸಿನಿಮಾದ ನಾಯಕನಾಗಿ ಸುದೀಪ್ ಅವರನ್ನು ಹಾಕಿಕೊಂಡಿದ್ದೆ. ಸುದೀಪ್ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೆ. ಆದರೆ ಬೇರೆ ಸಿನಿಮಾ ಇದ್ದ ಕಾರಣ ಅವರು ನಟಿಸಲು ಆಗಲಿಲ್ಲ. ಆಗ ಅವರೇ ತೂಗುದೀಪ ಶ್ರೀನಿವಾಸ್ ಮಗ ಚೆನ್ನಾಗಿದ್ದಾನೆ. ಒಳ್ಳೆಯ ಹೈಟ್, ಪರ್ನಾಲಿಟಿ ಇದೆ ಅವರನ್ನು ಹಾಕಿಕೊಳ್ಳಿ ಎಂದು ನನಗೆ ಹೇಳಿದರು’ ಎಂದಿದ್ದಾರೆ.
Be the first to comment