ನಾದಬ್ರಹ್ಮ ಹಂಸಲೇಖಾ ಇರುವ ಕಡೆ ಆಡುಭಾಷೆಗೆ ಬರವಿಲ್ಲ. ಗುರುವಾರ ಇವರ ಬಲಗೈ ಭಂಟ ಸಂಗೀತ ನಿರ್ದೇಶಕ ಪಳನಿಸೇನಾಪತಿ ಅವರ ಹೊಸ ’ಪಲ್ಸ್ ರೆರ್ಕಾಡಿಂಗ್ ಸ್ಟುಡಿಯೋ’ವನ್ನು ಉದ್ಗಾಟನೆ ಮಾಡಲು ಆಗಮಿಸಿದ್ದರು. ಶಿಷ್ಯನ ಸಾಧನೆಯನ್ನು ಕೊಂಡಾಡಿದ ಗುರುಗಳು ತಮ್ಮ ಮಾತಿನಲ್ಲಿ ಹೋಲ್ಡ್ ದಿ ಪಲ್ಸ್, ಲಿಸನ್ ದಿ ಮ್ಯೂಸಿಕ್. ಸೌಂಡ್ ಆಫ್ ಮ್ಯೂಸಿಕ್ ಇದೆ. ಸೌಂಡ್ ಆಫ್ ರುಪಿ ಬೇಕು.
ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಮಾಡುವ ಜಾಣತನ ಬೇಕಾಗಿದೆ. ನಮ್ಮ ಸಿನಿಮಾಗಳನ್ನು ಹೇಗೆ ಮಾರ್ಕೆಟ್ ಮಾಡಿಸಬೇಕು. ಇವತ್ತು ಉತ್ಪಾದನೆ ಇಷ್ಟು. ಮಾರಾಟ ಆಗುವ ಜಾಗಗಳು ಅಷ್ಟು. ಹುಷಾರಾಗಿ ಮಾರಾಟ ಮಾಡಿ ದುಡ್ಡು ವಾಪಸ್ಸು ತೆಗೆದುಕೊಳ್ಳಬೇಕಿದೆ.
ಎಂತಂಥ ಮಿಶಿನ್ಸ್‌ಗಳು ಬಂದಿದೆ. ಅವೆಲ್ಲಾ ಈಗ ಕೆಲಸ ಮಾಡ್ತಾ ಇದೆ ಅಂತ ಹೇಳೋಕೆ ಆಗೋಲ್ಲ. ಮನುಷ್ಯನ ಹಿಂದೆ ಮಿಶಿನ್. ಎಂತಂಥ ಮಿಶಿನ್, ಟೂಲ್ಸ್ ಬಂದಿದೆ. ಎಂತಂಥಾ ಫೂಲ್ಸ್ ಕೂತಿರ‍್ತಾರೆ. ಟೂಲ್ಸ್ ಅಂಡ್ ಪಲ್ಸ್ ಉತ್ತಮವಾಗಿದೆ. ಅಂಥಾ ಪಲ್ಸ್ ಪಳನಿಗೆ ಒಳ್ಳೆಯದಾಗಲಿ. ಗುಣಮಟ್ಟ ಕಾಪಾಡಿಕೊಳ್ಳೋದು ತಂತ್ರಜ್ಘನ ಕೆಲಸ. ಅದನ್ನು ಕಾಪಾಡಿಕೊಂಡರೆ ಹೆಸರು ಉಳಿಯುತ್ತದೆಂದು ಕಿವಿಮಾತು ಹೇಳಿದರು.
ನಂತರ ಮಾತನಾಡಿದ ಪಳನಿಸೇನಾಪತಿ ಇಲ್ಲಿಯವರೆಗೂ 1000ಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನಲೆ ಶಬ್ದ ಒದಗಿಸಿ, ಇಂದು ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ತಂತ್ರಜ್ಘಾನ ಮುಂದುವರಿದಂತೆ ಎಲ್ಲವು ಸಾಫ್ಟ್‌ವೇರ್ ಆಗಿರುವುದರಿಂದ ದೊಡ್ಡ ಜಾಗದಲ್ಲಿ ಸ್ಟುಡಿಯೋ ಮಾಡಬೇಕಾಗಿಲ್ಲ.ಚಿಕ್ಕ ಸ್ಥಳದಲ್ಲೆ ದೊಡ್ಡ ಕೆಲಸವನ್ನು ಮಾಡಬಹುದು. ಅಂತಹುದೆ ಸೇವೆಯನ್ನು ಶುರು ಮಾಡಲಾಗಿದೆ. ಹಂಸಲೇಖಾ ನನಗೆ ಗಾಡ್‌ಫಾದರ್. ಕರ್ನಾಟಕದ ತಂತ್ರಜ್ಘರು ಯಾವ ರೀತಿಯಲ್ಲಿ ಕಮ್ಮಿ ಇಲ್ಲ. ಮನಸ್ಸು ಮಾಡಿದರೆ ವಂಡರ‍್ಸ್ ಮಾಡಬಹುದು. ಆದರೆ ಆರ್ಥಿಕ ಪರಿಸ್ಥಿತಿಯಿಂದ ಅಂದುಕೊಂಡಂತೆ ಕೆಲಸಗಳು ಆಗುತ್ತಿಲ್ಲ.
ಸರ್ಕಾರವು ದೊಡ್ಡದಾದ ಸ್ಟುಡಿಯೋ ತೆರೆಯಲು ಬಂಡವಾಳ ಹೂಡಿದರೆ, ನಾವುಗಳು ಏನೆಂದು ತೋರಿಸಬಹುದು. ಬೇರೆ ಕಡೆ ಹೋದಾಗ ಕರ್ನಾಟಕದವರು ಎಂದು ತಾತ್ಸರ ಮಾಡುತ್ತಾರೆ. ನಮ್ಮಲ್ಲೂ ನುರಿತ ಟೆಕ್ನಿಷಿಯನ್ಸ್ ಇದ್ದಾರೆ. ನಮ್ಮ ಪ್ರತಿಭೆಗೆ ಫಲ ಸಿಗಬೇಕೆಂಬುದೇ ನನ್ನ ಹೋರಾಟವಾಗಿದೆ.
ಮೂಲೆ ಗುಂಪಾಗಿರುವ ವಾದ್ಯಗಳನ್ನು ಮುಖ್ಯ ವೇದಿಕೆಗೆ ತರೆಬೇಕೆಂಬ ತುಡಿತವಿದೆ ಎಂದು ಮನದಾಳದ ಕನಸುಗಳನ್ನು ಮಾದ್ಯಮದ ಮುಂದೆ ಹೊರಗೆ ಹಾಕಿದರು. ಹಿರಿಯ ನಿರ್ದೇಶಕ ಭಗವಾನ್, ಲಹರಿವೇಲು, ವಿ.ಮನೋಹರ್, ನಟ ವಿಜಯ್‌ಮಹೇಶ್, ನಿರ್ಮಾಪಕರುಗಳು ಶುಭಸಂದರ್ಭದಲ್ಲಿ ಹಾಜರಿದ್ದರು.
Be the first to comment