‘ಸೈಕೋ’ನಟಿಗೆ ‘ಬಳೆಪೇಟೆ’ಯಲ್ಲೇನು ಕೆಲಸ ಗೊತ್ತಾ?!

‘ಸೈಕೋ’ ಚಿತ್ರದ ನಟಿ ಅನಿತಾ ಭಟ್ ನಿಮಗೆಲ್ಲಾ ನೆನಪಿರಬಹುದು. ಆ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದ ಅನಿತಾ ಭಟ್, ಸುಗ್ರೀವ, ಪರಪಂಚ, ನಗೆಬಾಂಬ್, ಶಟರ್ ದುಲಾಯಿ, ಎರೆಗ್ಲಾ ಪನೋಡ್ಚಿ, ದೊಡ್ಮನೆ ಹುಡ್ಗಾ, ಡೇಸ್ ಆಫ್ ಬೋರಾಪುರ, ಹೊಸಾ ಕ್ಲೆಮಾಕ್ಸ್.. ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು.

‘ಬೆಂಗಳೂರು ೬೯’, ಕಲಿವೀರ, ಕನ್ನೇರಿ ಹಾಗೂ ಸದ್ಗುಣ ಸಂಪನ್ನ’ ಸಿನಿಮಾಗಳಲ್ಲಿ ಅನಿತಾ ನಟಿಸುತ್ತಿದ್ದಾರೆ. ಈ ನಾಲ್ಕೂ ಸಿನಿಮಾಗಳು ವಿವಿಧ ಹಂತದಲ್ಲಿದ್ದರೆ… ‘ಬಳೆಪೇಟೆ’ ಅನ್ನೋದು ನಟಿ ಅನಿತಾಭಟ್ ಅವರ ಹೊಸ ಚಿತ್ರದ ಹೆಸರು. ದೀಪಾವಳಿ ಹಬ್ಬಕ್ಕೆ ಅವರ ‘ಬಳೆಪೇಟೆ’ ಚಿತ್ರದ ಫಸ್ಟ್ ಲುಕ್ ಹೊರಬಂದಿದೆ. ಪೋಸ್ಟರ್ ನೋಡಿದ್ರೆ ಅನಿತಾ ಭಟ್ ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರೋದು ಗೊತ್ತಾಗುತ್ತೆ. ಗ್ಯಾಂಗ್‌ಸ್ಟರ್ ಗುಂಪಿನ ಮಧ್ಯೆ ರಾ ಲುಕ್‌ನಲ್ಲಿ ಕಾಣಿಸಿಕೊಂಡ ಅನಿತಾ ಅವರ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿರೋದು ಸುಳ್ಳಲ್ಲ.

ಈ ಚಿತ್ರಕ್ಕೆ ರಿಷಿಕೇಶ್ ನಿರ್ದೇಶಕರು. ಇದು ಇವರ ಚೊಚ್ಚಲ ಚಿತ್ರ. ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡಿದ್ದು, ಜೊತೆಗೆ ಕ್ಯಾಮೆರಾ ಹಿಡಿದಿದ್ದಾರೆ. ಸಂಕಲನವನ್ನು ಮಾಡಿದ್ದಾರೆ. ಅನಿತಾಭಟ್ ಈ ಚಿತ್ರದ ಮುಖ್ಯ ಆಕರ್ಷಣೆ. ಪ್ರಮೋದ್ ಬೋಪಣ್ಣ, ಉಮೇಶ್ ಬಣಕಾರ್, ಮಯೂರ್ ಪಟೇಲ್ ಇತರರು ನಟಿಸಿದ್ದಾರೆ. ಶಿವರಾಮ್ ನಿರ್ಮಾಣವಿದೆ. ಅನಿತಾಭಟ್ ಅಭಿನಯದ ‘ಬೆಂಗಳೂರು ೬೯’, ‘ಕಲಿವೀರ’, ‘ಕನ್ನೇರಿ’, ‘ಡಿಎನ್ಎ’, ‘ಜೂಟಾಟ’ ಮತ್ತು ‘ಪ್ರಭುತ್ವ’ ಚಿತ್ರಗಳಿವೆ. ಸದ್ಯ ರಿಲೀಸ್‌ಗೆ ರೆಡಿ ಇರುವ ಸಿನಿಮಾಗಳ ಜೊತೆ ಈಗ ‘ಬಳೆಪೇಟೆ’ಯೂ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!