ಕಮಲ್ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

ತಮಿಳಿಂದ ಕನ್ನಡ ಭಾಷೆ ಹುಟ್ಟಿದ್ದು ಎಂಬ ನಟ ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರ  ಆಕ್ರೋಶದ ಕಟ್ಟೆಯೊಡೆದಿದ್ದು, ನಟ ಕ್ಷಮೆ ಕೇಳಲ್ಲ ಎಂದು ಹೇಳಿದ ಬೆನ್ನಲ್ಲೇ ಅವರ  ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ.

ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪವಿತ್ರ ಪ್ಯಾರಡೈಸ್ ಸಿಗ್ನಲ್ ಬಳಿ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. ರಾತ್ರೋ ರಾತ್ರಿ ಓರ್ವ ಕನ್ನಡಾಭಿಮಾನಿ ಕಮಲ್ ಹಾಸನ್ ಹೇಳಿಕೆಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.  ಫೋಟೋಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ನೀರು ಹಾಕಿ ಬ್ಯಾನರ್‌ನ್ನು ರಸ್ತೆಯಿಂದ ತೆಗೆದು ಹಾಕಿದ್ದಾರೆ.

ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ನಟ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ.

ಕಮಲ್ ಹಾಸನ್ ಹೇಳಿಕೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದು, ಕಮಲ್ ಹಾಸನ್ ನನಗೆ ಬಹಳ ಇಷ್ಟ. ನನ್ನ ತಂದೆ ಮತ್ತು ಕಮಲ್ ಅವರ ಸಂಬಂಧ ಬೇರೆ.  ನಾನು ಕಮಲ್ ಅವರನ್ನು ನನಗೆ ಸ್ಪೂರ್ತಿ ಎಂದು ಭಾವಿಸಿದ್ದೇನೆ. ನಮ್ಮನ್ನ ಅವರ ಕಾರ್ಯಕ್ರಮಕ್ಕೆ ಕರೆದಿದ್ದರು. ಹೀಗಾಗಿ ಹೋದ್ವಿ- ಬಂದ್ವಿ ಅಷ್ಟೇ ಎಂದರು.

ಬರೀ ಬಾಯಿಯಲ್ಲಿ ಮಾತ್ರ ಕನ್ನಡ, ಕನ್ನಡ ಅನ್ನಬಾರದು. ಕನ್ನಡಕ್ಕಾಗಿ ನಾನು ಹೋರಾಟ ಮಾಡುತ್ತೇನೆ, ಕನ್ನಡಕ್ಕಾಗಿ ನಾನು ಸಾಯುತ್ತೇನೆ,  ಕನ್ನಡ ಅಂತೀರಾ, ಸ್ಟಾರ್ ನಟರಿಗೆ ಮಾತ್ರ ಬೆಂಬಲಿಸೋದು. ಹೊಸಬರನ್ನೂ ಕೂಡ ಬೆಳೆಸಬೇಕು. ಕಮಲ್ ಹಾಸನ್ ಅವರಿಗೆ ಇದೆಲ್ಲ ಗೊತ್ತಾಗುತ್ತದೆ. ಅವರೇ ಅದನ್ನು ಸರಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!