ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಬಯೋಪಿಕ್ ನಲ್ಲಿ ಡಾಲಿ ಧನಂಜಯ ಪ್ರೊ. ನಂಜುಂಡಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ಪ್ರತಿಮಾ ನಂಜುಂಡಸ್ವಾಮಿಯಾಗಿ ರಮ್ಯಾ ನಟಿಸಲಿದ್ದಾರೆ.
ಪ್ರೊ.ನಂಜುಂಡಸ್ವಾಮಿ ಅವರ ಬಯೋಪಿಕ್ ಇನ್ನು ಒಂದು ವರ್ಷದೊಳಗೆ ತಯಾರಾಗಲಿದೆ. ಡಾಲಿ ಧನಂಜಯ ಸಿನಿಮಾ ನಿರ್ಮಾಣದ ಕಡೆ ಒಲವು ತೋರಿದ್ದಾರೆ.
ಎಂಡಿಎನ್ ಪುತ್ರ ಪಚ್ಚೆ, ಧನಂಜಯ ಅವರು ಮೂರು ತಿಂಗಳ ಹಿಂದೆ ಚಿತ್ರ ನಿರ್ಮಾಣ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ.ನಾವು ಕಥೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದಿದ್ದಾರೆ.
ನನ್ನ ಬಳಿ ಸುಮಾರು 300 ಗಂಟೆಗಳ ದೃಶ್ಯಾವಳಿಗಳಿವೆ. ಅದರಲ್ಲಿ 80 ದೃಶ್ಯಗಳನ್ನು ಚಿತ್ರದ ದೃಶ್ಯಗಳಾಗಿ ಪರಿವರ್ತಿಸಬಹುದು. ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ – ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಇಂಗ್ಲಿಷ್ ಗೆ ಡಬ್ ಆಗಲಿದೆ” ಎಂದು ಪಚ್ಚೆ ತಿಳಿಸಿದ್ದಾರೆ.
ಸ್ವದೇಶಿ ಪ್ರಚಾರ ಮಾಡಿದ ಅಪರೂಪದ ಹೋರಾಟಗಾರ ನಂಜುಂಡಸ್ವಾಮಿ ಆಗಿದ್ದರು. ಅವರು ಜರ್ಮನಿಯಲ್ಲಿ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು, ಸಮಾಜವಾದಿ ಯುವಜನ ಸಭಾ ಹುಟ್ಟು ಹಾಕಿ ನಿರಂತರ ಹೋರಾಟ ಮಾಡಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು 1989 ರಲ್ಲಿ ಅವರು ಸ್ವತಂತ್ರ ಶಾಸಕರಾಗಿ ಆಯ್ಕೆಯಾಗಿದ್ದರು.
___





Be the first to comment