ರಾಕಿಂಗ್ ಸ್ಟಾರ್ ಯಶ್ ಸ್ವಂತ ಪ್ರೊಡಕ್ಷನ್ ಹೌಸ್ ಕಟ್ಟಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಸಿನಿಮಾ ಸಂಸ್ಥೆಗೆ ಯಶ್ ಮಗಳು ಐರಾ ಹೆಸರನ್ನು ಇಡಲಿದ್ದಾರೆ. ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಮಡದಿ ರಾಧಿಕಾ ಪಂಡಿತ್ ಅವರಿಗೆ ವಹಿಸಿಕೊಡುತ್ತಿದ್ದಾರೆ ಎಂದು ಹೇಳಲಾಗಿದೆ.
ದೊಡ್ಡ ಮಟ್ಟದ ಬಂಡವಾಳ ಹೂಡಿ ಸಿನಿಮಾ ಮಾಡಲು ನಿರ್ಮಾಣ ಸಂಸ್ಥೆಗಳು ರಾಕಿಗೆ ದುಂಬಾಲು ಬೀಳುತ್ತಿವೆ. ಆದರೆ ಯಶ್, ತಮ್ಮದೇ ಸ್ವಂತ ಬ್ಯಾನರ್ ಕಟ್ಟಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಕೆಜಿಎಫ್ 3 ಮೂಲಕ ಯಶಸ್ಸಿನ ಯಾತ್ರೆಯನ್ನು ಹೊಂಬಾಳೆ ಫಿಲಂಸ್ ಮುಂದುವರಿಸಬಹುದು ಎಂದು ಊಹೆ ಮಾಡುತ್ತಿರುವಾಗಲೇ ಯಶ್ ಸಿನಿಮಾ ನಿರ್ಮಾಣಕ್ಕಿಳಿಯುತ್ತಿರುವ ಸುದ್ದಿ ಬಂದಿದೆ.
ಯಶ್ ಅವರ 19ನೇ ಸಿನಿಮಾ ಈ ಪ್ರೊಡಕ್ಷನ್ನಡಿ ಹೊರಬರಲಿದೆಯಾ ಎನ್ನುವ ಪ್ರಶ್ನೆ ಕಾಡಿದೆ. ಅದರ ಜೊತೆಗೆ ಯಶ್ ಅವರ ಈ ಚಿತ್ರವನ್ನು ಯಾರು ನಿರ್ದೇಶನ ಮಾಡ್ತಾರೆ ಎನ್ನುವ ಕುತೂಹಲ ಮೂಡಿದೆ.
___

Be the first to comment