ಲೈಂಗಿಕ ಕಿರುಕುಳ ಆರೋಪ: ಉದ್ಯಮಿ ಬಂಧನ

ಕನ್ನಡ  ಸಿನಿಮಾಗಳಲ್ಲಿ ನಟಿಸಿದ  ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ್ ವೆಂಕಟೇಶ ರೆಡ್ಡಿಯನ್ನು ಬಂಧಿಸಲಾಗಿದೆ.

ನಟಿ  ಕನ್ನಡದಲ್ಲಿ 9ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆರೋಪ ಪ್ರಕಾರ, 2021ರಲ್ಲಿ ಅರವಿಂದ್ ಮತ್ತು ನಟಿ ಪರಿಚಯ ಹೊಂದಿದ್ದಾರೆ. 2022ರಲ್ಲಿ ಶ್ರೀಲಂಕಾದ ‘ಲಾರ್ಸ್ ಕ್ರಿಕೆಟ್ ಕಪ್’ ಉದ್ಘಾಟನೆ ವೇಳೆ ಇಬ್ಬರ ಮಧ್ಯೆ ಸ್ನೇಹ ಬಾಂಧವ್ಯ ಬೆಳೆಯಿತು. ಈ ಸಂಬಂಧ  ನಂತರ ಅರವಿಂದ್ ಲೈಂಗಿಕ ಕಿರುಕುಳ  ಕೊಟ್ಟಿರುವುದಾಗಿ ಆರೋಪಿಸಲಾಗಿದೆ.  ನಟಿ  ಆತ್ಮಹತ್ಯೆ ಪ್ರಯತ್ನಕ್ಕೆ ಮುಂದಾಗಿರುವುದಾಗಿ ಆರೋಪ  ಮಾಡಿದ್ದಾರೆ.

ಅರವಿಂದ್ ಹಿಂಸಾತ್ಮಕ ವರ್ತನೆ ಕೂಡ ತೋರಿಸಿದ್ದಾರೆ ನಟಿಯ ಸ್ವತಂತ್ರ ಸಂಪರ್ಕವನ್ನು ನಿರಾಕರಿಸಿದ್ದಾರೆ. ನಂತರ ನಟಿ  ತಾಯಿ ಬಳಿ ಈ ಬಗ್ಗೆ ಮಾಹಿತಿ ನೀಡಿದಾಗ, ಅರವಿಂದ್   ನಟಿ ಹಾಗೂ ಅವರ ಗೆಳೆಯರ ಮೇಲೆ ಅಸತ್ಯ ಆರೋಪಗಳನ್ನು ಮಾಡಿದ್ದಾರೆ ಎನ್ನಲಾಗಿದೆ.

ಅರವಿಂದ್  ‘ಮಹಾರಾಜ ಬಳ್ಳಾರಿ ಟಸ್ಕರ್ಸ್’ ಕ್ರಿಕೆಟ್ ತಂಡದ ನಾಯಕ ಮತ್ತು ಚಿತ್ರ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಆರೋಪದ  ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಕರಣದ ಪ್ರಾಥಮಿಕ ಎಫ್ಐಆರ್ ಕಳೆದ ತಿಂಗಳು 17ರಂದು ದಾಖಲಾಗಿತ್ತು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!