ಹೊಸ ಬಗೆಯ ಪಾತ್ರಗಳನ್ನು ಸವಾಲಾಗಿ ಸ್ವೀಕರಿಸುವ ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಮುಂಬರುವ ಸಿನಿಮಾದಲ್ಲಿ ಸರ್ಕಾರಿ ಶಾಲೆಯ ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಸ್ ನಂದಿನಿ ಹೆಸರಿನ ಸಿನಿಮಾದಲ್ಲಿ ಪ್ರಿಯಾಂಕಾ ಅವರು ಟೀಚರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರವನ್ನು ಎಸ್ ಆರ್ ಗುರುದತ್ತ ಅವರು ನಿರ್ದೇಶನ ಮಾಡಲಿದ್ದಾರೆ.
ಮಿಸ್ ನಂದಿನಿ ಮಕ್ಕಳ ಚಿತ್ರವಾಗಿದೆ. ಚಿತ್ರದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಸರ್ಕಾರಿ ಶಾಲೆ ಖಾಸಗಿ ಶಾಲೆಯ ಗುಣಮಟ್ಟಕ್ಕೆ ಏರಲು ಸಾಧ್ಯ ಎನ್ನುವ ಅಂಶ ಸಿನಿಮಾದಲ್ಲಿ ಇರಲಿದೆ.
ಆರ್ ಕೆ ಬ್ಯಾನರ್ ನಲ್ಲಿ ಮಿಸ್ ನಂದಿನಿ ಸಿನಿಮಾ ನಿರ್ಮಾಣಗೊಳ್ಳಲಿದೆ. ಸಾಯಿ ಸರ್ವೇಶ್ ಅವರು ಸಂಗೀತ ನಿರ್ದೇಶನ, ವೀರೇಶ್ ಸಿನಿಮೆಟೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ. “ನನಗೆ ಶಿಕ್ಷಕಿಯಾಗುವ ಆಸೆ ಮತ್ತು ಅವಕಾಶಗಳಿದ್ದವು. ಆದರೆ ಕೆಲವು ಕಾರಣಗಳಿಂದ ಶಿಕ್ಷಕಿಯಾಗಲು ಸಾಧ್ಯವಾಗಲಿಲ್ಲ. ಆದರೆ ಆ ಕನಸು ಈ ಸಿನಿಮಾದ ಮೂಲಕ ನನಸಾಗುತ್ತಿದೆ. ಬೆಳ್ಳಿಪರದೆ ಮೇಲೆ ಶಿಕ್ಷಕಿಯಾಗುತ್ತಿರುವುದು ಹರ್ಷ ತಂದಿದೆ” ಎಂದು ಪ್ರಿಯಾಂಕಾ ಉಪೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪ್ರಿಯಾಂಕಾ ಉಪೇಂದ್ರ ನಟನೆಯ ಬಹು ನಿರೀಕ್ಷಿತ ಚಿತ್ರ ‘1980’ ಒಟಿಟಿ ಮೂಲಕ ಅಕ್ಟೋಬರ್ 15 ರಂದು ಬಿಡುಗಡೆ ಆಗಲಿದೆ. ಚಿತ್ರವನ್ನು ‘ನಮ್ಮ ಫ್ಲಿಕ್ಸ್’ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರ ತಂಡ ಹೆಜ್ಜೆ ಇಟ್ಟಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಕಾದಂಬರಿಗಾರ್ತಿಯ ಪಾತ್ರ ಮಾಡಿದ್ದಾರೆ. ಚಿತ್ರದ ಟೈಟಲ್ 1980 ಎಂದು ಇರುವ ಕಾರಣ ಇದಕ್ಕೆ ಹೊಂದಿಕೆ ಆಗುವಂತೆ ರೆಟ್ರೊ ಲುಕ್ ನಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ.
ಈ ಚಿತ್ರ ಅಲ್ಲದೇ ಪ್ರಿಯಾಂಕಾ ಉಪೇಂದ್ರ ಅವರು, ಲೈಫ್ ಈಸ್ ಬ್ಯೂಟಿಫುಲ್, ಉಗ್ರಾವತಾರ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಜೊತೆಗೆ ತ್ರಿವಿಕ್ರಮ ರಘು ನಿರ್ದೇಶನದ ಟೈಟಲ್ ಇಡದ ಹೊಸ ಚಿತ್ರದಲ್ಲಿ ‘ಡಿಟೆಕ್ಟಿವ್ ತೀಕ್ಷ್ಣ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
____
Be the first to comment